ಡಿಜಿಟಲ್ ಮೀಟರ್: ಜನಪೀಡಕ ನಿರ್ಧಾರ ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ

0
44

ಸ್ಮಾರ್ಟ್ ಮೀಟರ್: ವಿದ್ಯುತ್ ಉಚಿತ ಕೊಡಿ ಎಂದು ಯಾರು ಕೇಳಿದ್ದರು

ಬೆಂಗಳೂರು: ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ಹೊಸದಾಗಿ ನಿರ್ಮಾಣಗೊಂಡಿರುವ ಮನೆಯೊಂದಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ನೀಡಿದ್ದ ಪತ್ರಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಇನ್ನು ಈ ಕುರಿತಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ “ಡಿಜಿಟಲ್ ಮೀಟರ್ ಹೆಸರಲ್ಲಿ ಬಡವರನ್ನು ಹಿಂಡುತ್ತಿದ್ದ ಕೈ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿಯ ಮೂಲಕ 200 ಯೂನಿಟ್‌ ವರೆಗೆ ಎಲ್ಲರಿಗೂ ಉಚಿತ ವಿದ್ಯುತ್‌ ನೀಡುತ್ತೇವೆ ಎಂದು ಅವಾಸ್ತವಿಕ ಗ್ಯಾರಂಟಿ ನೀಡಿ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಗ್ಯಾರಂಟಿ ಅನುಷ್ಠಾನದ ಬಳಿಕ ಇಂಧನ ಇಲಾಖೆ ದಿವಾಳಿಯಂಚಿಗೆ ಸಾಗಿದ ಬೆನ್ನಲ್ಲೇ ಗ್ರಾಹಕರ ಮೇಲೆ ಹೊರೆ ಹಾಕಿ ದಿನದಿಂದ ದಿನಕ್ಕೆ ವಿದ್ಯುತ್‌ ದರ ಏರಿಸುತ್ತಲೇ ಇದ್ದ ಈ ಸರ್ಕಾರ ಇದೀಗ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ ₹10,000 ರೂ. ನಿಗಧಿಪಡಿಸಿದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ.

₹2000 ರೂ. ಇದ್ದ ಸ್ಮಾರ್ಟ್ ಮೀಟರ್ ಬೆಲೆಯನ್ನು ₹10000 ಕ್ಕೆ ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಿ ಎಂದು ಯಾರಾದರೂ ಕೇಳಿದ್ರಾ? ಬಡವರ ಸ್ಥಿತಿ ಏನಾಗಬೇಕು? ಎಂದು ಉಚ್ಛ ನ್ಯಾಯಾಲಯ ಮಂಗಳಾರತಿ ಎತ್ತಿದೆ. ಇನ್ನಾದರೂ ಈ ಸರ್ಕಾರ ಜನಪೀಡಕ ನಿರ್ಧಾರಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

Previous articleಚಂದನ್​ ಶೆಟ್ಟಿಯ ‘ಸೂತ್ರಧಾರಿ’ ಟ್ರೈಲರ್ ಅನಾವರಣ
Next articleನಾವು ಯುದ್ಧದ ಪರ ಇಲ್ಲ: ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು