ಡಿಕೆಶಿಗೆ ಢವ ಢವ..

0
20
ಜೋಡೋಗೆ ಡಿಕೆ ಗೈರು

ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ ಅವರಿಗೆ ನಾಮಪತ್ರ ತಿರಸ್ಕಾರ ಆಗುವ ಬಗ್ಗೆ ಟೆನ್ಶೆನ್ ಶುರುವಾಗಿದೆ.
ಸದ್ಯ ನಾಮಪತ್ರ ಪರಿಶೀಲನೆ ಕಾರ್ಯ ಆರಂಭವಾಗಿದ್ದು, ಡಿಕೆಶಿ ಎದೆಯಲ್ಲಿ ಢವ ಢವ ಶುರುವಾದಂತಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಅಧಿಕಾರಿಗಳನ್ನು ಬಳಸಿ ಅವರ ಮೇಲೆ ಒತ್ತಡ ಹೇರಿ ನನ್ನ ನಾಮಪತ್ರ ತಿರಸ್ಕಾರ ಮಾಡುವ ಬಗ್ಗೆ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ‌‌. ಆದರೆ, ಡಿಕೆಶಿ ಮೊದಲೇ ಸಹೋದರ ಡಿ.ಕೆ.ಸುರೇಶ ಅವರಿಂದಲೂ ಸಹ ನಾಮಪತ್ರ ಸಲ್ಲಿಕೆ ಮಾಡಿಸಿದ್ದು, ಎಲ್ಲದಕ್ಕೂ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕವೇ ಪೂರ್ಣ ಚಿತ್ರಣ ತಿಳಿದು ಬರಲಿದೆ.

Previous articleನನ್ನ ವಿರುದ್ಧ ಷಡ್ಯಂತ್ರ ನಡೆದಿದೆ
Next articleಕೋರ್ಟಿನ ಆವರಣದಲ್ಲೇ ಗುಂಡಿನ ದಾಳಿ: ಮಹಿಳೆಯ ಸ್ಥಿತಿ ಗಂಭೀರ