ಡಿಕೆಶಿ ಬಳಿ ಪೆನ್‌ಡ್ರೈವ್ ಫ್ಯಾಕ್ಟರಿ ಇದೆ

0
9

ಕುಷ್ಟಗಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಶ್ಲೀಲ ವಿಡಿಯೋದ ಪೆನ್‌ಡ್ರೈವ್ ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ ಎಂದು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಕಿಡಿಕಾರಿದರು.
ಪಟ್ಟಣದ ಬಿಜೆಪಿಯ ಅಂಜನಾದ್ರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವ ಅಮಾಯಕ ಮಹಿಳೆಯರ ಮುಖ ಬ್ಲರ್ ಮಾಡದೆ ಹಾಗೆ ತೋರಿಸಲಾಗಿದೆ. ಇದರಿಂದ ಮಹಿಳೆಯರ ಮಾನ-ಮರ್ಯಾದೆಗೆ ಧಕ್ಕೆ ಆಗಿದೆ. ಇಂತಹ ಹೀನ ಕೃತ್ಯಕ್ಕೆ ಡಿ.ಕೆ. ಶಿವಕುಮಾರ್ ಇಳಿಯಬಾರದಿತ್ತು. ರಾಜಕೀಯಕ್ಕಾಗಿ ಸಿಡಿ ಮತ್ತು ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ತಯಾರಿಕೆ ಮಾಡುವಲ್ಲಿ ಅವರದ್ದು ಎತ್ತಿದ ಕೈ ಎಂದರು.
ಡಿಸಿಎಂ ಅವರು ಕೊತ್ವಾಲ್ ರಾಮಚಂದ್ರ ಅವರ ಕೈಯಲ್ಲಿ ಬೀಡಿ ಮತ್ತು ಚಹಾ ತಂದುಕೊಡುತ್ತಿದ್ದರು. ಅತ್ಯಂತ ಹೀನ ಸಂಸ್ಕೃತಿ ಡಿ.ಕೆ. ಶಿವಕುಮಾರ್ ಬೆಳೆಸಿಕೊಂಡಿದ್ದಾರೆ ಎಂದರು.

Previous articleಇಳಕಲ್ ಸೀರೆಯಲ್ಲಿ ಕಪ್ ನಮ್ದೇ..!
Next articleಸಿಡಿಲು ಬಡಿದು ರೈತ ಸಾವು