ಡಾ.ಸರಸ್ವತಿ ಕಳಸದಗೆ ರಾಷ್ಟ್ರೀಯ ವಿದ್ಯಾಭೂಷಣ ಪ್ರಶಸ್ತಿ

0
22

ಹುಬ್ಬಳ್ಳಿ : ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ(ರಿ), ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ(ರಿ) ಕೊಡಮಾಡುವ “ ರಾಷ್ಟ್ರೀಯ ವಿದ್ಯಾಭೂಷಣ ರಾಷ್ಟ್ರ ಪ್ರಶಸ್ತಿ” ಗೆ ಇಲ್ಲಿನ ನಿವೃತ್ತ ಪ್ರಾಚಾರ್ಯೆ ಡಾ. ಸರಸ್ವತಿ ಆರ್.ಕಳಸದ ಅವರು ಭಾಜನರಾಗಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ನೀಡಿದ ಗುರುತರ ಮೌಲ್ಯಾಧಾರಿತ ಸೇವೆ , ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇದೇ ಡಿಸೆಂಬರ್ 27 ರಂದು ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

Previous articleಬೆಳಗಾವಿ ಕಾಂಗ್ರೆಸ್ ಅಧಿವೇಶನ ಕನ್ನಡಿಗರ ಪಾಲಿಗೂ ಮಹತ್ವ
Next articleಲಾಠಿ ಬೀಸಿದವರಿಗೆ 10ಸಾವಿರ ಬಹುಮಾನ