Home ನಮ್ಮ ಜಿಲ್ಲೆ ಡಬಲ್ ಮರ್ಡರ್: ಆರು ಜನರ ಬಂಧನ

ಡಬಲ್ ಮರ್ಡರ್: ಆರು ಜನರ ಬಂಧನ

0
107
ಡಬಲ್ ಮರ್ಡರ್: ಆರು ಜನರ ಬಂಧನ

ಬೆಳಗಾವಿ: ಸುಳೇಬಾವಿ ಗ್ರಾಮದಲ್ಲಿ ಮೊನ್ನೆ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬೆಳಗಾವಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತರನ್ನು ಸುಳೇಬಾವಿಯ ಶಶಿಕಾಂತ ಅಲಿಯಾಸ್‌ ಜುಟ್ಟು ಭೀಮಶಿ ಮಿಸಾಳೆ (24), ಯಲ್ಲೇಶ ಸಿದರಾಯಿ ಹುಂಕರಿಪಾಟೀಲ (22), ಮಂಜುನಾಥ ಶಿವಾಜಿ ಪರೋಜಿ (22), ದೇವಪ್ಪ ರವಿ ಕುಕಡೊಳ್ಳಿ (26), ಬಿ.ಕೆ.ಖಣಗಾಂವಿಯ ಸಂತೋಷ ಯಲ್ಲಪ್ಪ ಹಣಭರಟ್ಟಿ (20), ಭರಮಣ್ಣ ನಾಗಪ್ಪ ನಾಯಕ (20) ಎಂದು ಗುರುತಿಸಲಾಗಿದೆ. ಗ್ಯಾಂಗ್‌ವಾರನಲ್ಲಿ ಮೃತಪಟ್ಟ ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಅವರು ಸುಳೇಭಾವಿಯ ಡಾನ್ ಎಂಬುವಂತೆ ಬಿಂಬಿಸುವ ರೀಲ್ಸ್ ಮತ್ತು ವಾಟ್ಸಾಪ್ ಸ್ಟೇಟಸ್ ಇಟ್ಟು ಮತ್ತೊಂದು ಗ್ಯಾಂಗಿನವರನ್ನು ಉರಿಸುತ್ತಿದ್ದರು ಎನ್ನಲಾಗುತ್ತಿದೆ. ಬಂಧಿತರನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗಲೇ ಈ ಕೃತ್ಯದ ಹಿಂದಿನ ಮತ್ತಷ್ಟು ಮಾಹಿತಿ ಹೊರಬೀಳಲಿದೆ.