ಟ್ಯಾಂಕರ್-ಬೊಲೆರೋ ಡಿಕ್ಕಿ: ಇಬ್ಬರು ಸಜೀವ ದಹನ

0
43

ಕುಷ್ಟಗಿ: ಸಿಮೆಂಟ್ ಟ್ಯಾಂಕರ್ ಮತ್ತು ಬೊಲೆರೋ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡ ಧಾರುಣ ಘಟನೆ ಗುರುವಾರ ತಾಲೂಕಿನ ನಂದಾಪುರ ಹತ್ತಿರ ನಡೆದಿದೆ.
ತಾವರಗೇರಾದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿಯು ಕುಷ್ಟಗಿಯಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿಯಾಗಿದೆ. ಬೆಂಕಿ ಹೊತ್ತಿಕೊಂಡಿದ್ದು, ಬೊಲೆರೋದಲ್ಲಿದ್ದ ಸಿದ್ದಪ್ಪ ಚತ್ರಪ್ಪ ಪೊಲೀಸ್ ಪಾಟೀಲ(25), ಅಂಜಪ್ಪ ಸೋಮಪ್ಪ ಪೊಲೀಸ್ ಪಾಟೀಲ(30) ಸಜೀವ ದಹನವಾಗಿದ್ದಾರೆ.
ಮೃತಪಟ್ಟ ಇಬ್ಬರೂ ರಾಯಚೂರು ಜಿಲ್ಲೆ ಲಿಂಗಸೂಗುರ ತಾಲ್ಲೂಕಿನ ತೊಡಕಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದ್ದು, ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯರು ಕುಷ್ಟಗಿ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

Previous articleRCB ಕ್ಯಾಪ್ಟನ್‌ ಆಗಿ ಆಯ್ಕೆ: ಕನ್ನಡದಲ್ಲಿಯೇ ಧನ್ಯವಾದ ತಿಳಿಸಿದ ಪಾಟೀದಾರ್
Next articleಬೆಂಗಳೂರಿನಲ್ಲಿ ಅಗ್ನಿ ಅವಘಡ