ಜೋಶಿ ಕಾರ್ಯಕ್ಷಮತೆ ಮಾದರಿಯಾದುದು: ಸಚಿವ ಜೈಶಂಕರ್ ಶ್ಲಾಘನೆ

0
10

ಹುಬ್ಬಳ್ಳಿ: ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ೧೦ ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತ
`ಪ್ರಗತಿಯ ನೋಟ’ ಪುಸ್ತಕವನ್ನು ಬುಧವಾರ ನಗರದ ಬಿ.ವಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರಲ್ಹಾದ ಜೋಶಿ ಅಪ್ಪಟ್ಟ ಜನನಾಯಕರಾಗಿದ್ದಾರೆ. ಅವರ ಕಾರ್ಯಕ್ಷಮತೆ ಮಾದರಿಯಾದುದು. ಜೋಶಿ ಅವರ ಅಭಿವೃದ್ಧಿಯ ಪಕ್ಷಿನೋಟ ಪುಸ್ತಕದಲ್ಲಿ ನೀವು ನೋಡುತ್ತಿದ್ದೀರಿ. ಅವರ ಅಭಿವೃದ್ಧಿಯ ಕುರಿತ ಪ್ರಯತ್ನ, ಮಾಡಿರುವ ಕಾರ್ಯವನ್ನು ನಾನು ದೆಹಲಿಯಲ್ಲಿ ನೋಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಖೇಲೋ ಇಂಡಿಯಾ ಕಾಂಪ್ಲೆಕ್ಸ್, ರೈಲ್ವೆ ಅಭಿವೃದ್ಧಿ, ಐಐಟಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.

Previous articleಅನಾರೋಗ್ಯದಿಂದ ಮತದಾನಕ್ಕೆ ತೆರಳಿಲ್ಲ
Next articleತಮಿಳುನಾಡು ಜಾಹೀರಾತಲ್ಲಿ ಚೀನಾ ರಾಕೆಟ್‌ಗೆ ಆಕ್ಷೇಪ