ಜೋಡೋಗೆ ಡಿಕೆ ಬ್ರದರ್ಸ್‌ ಗೈರು

0
22
ಜೋಡೋಗೆ ಡಿಕೆ ಗೈರು

ಮಂಡ್ಯ: ಭಾರತ್‌ ಜೋಡೋ ಪಾದಯಾತ್ರೆ ಜವಾಬ್ದಾರಿ ವಹಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಜಾರಿ ನಿರ್ದೇಶನಾಲಯದ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ದಾರೆ.
ಒಕ್ಕಲಿಕರ ಶಕ್ತಿ ಕೇಂದ್ರವಾದ ಆದಿ ಚುಂಚನಗಿರಿ ಮಠದ ಮೈದಾನದಲ್ಲಿ ರಾಹುಲ್ ವಾಸ್ತವ್ಯ ಮಾಡುತ್ತಿದ್ದರೂ ಸಹಾ ಡಿಕೆ ಬ್ರದರ್ಸ್‌ ಜೊತೆಗಿರಲು ಸಾಧ್ಯವಾಗುತ್ತಿಲ್ಲ. ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಧ್ರುವನಾರಾಯಣ್, ಶಾಸಕ ಪ್ರಿಯಾಂಕ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಸಹಸ್ರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Previous articleರಾಹುಲ್ ಗಾಂಧಿಗೆ ಟಿಪ್ಪು, ಕುವೆಂಪು ಪುಸ್ತಕ ಕೊಡುಗೆ
Next articleಮುರನಾಳದಲ್ಲಿ ಮೊಸಳೆ ಸೆರೆ ಕಾರ್ಯಾಚರಣೆ..!