ಜೋಡಿ ಕೊಲೆ: ಕರ್ತವ್ಯ ಲೋಪ ಪೊಲೀಸರ ಅಮಾನತು

0
17
ಜೋಡಿ ಕೊಲೆ: ಕರ್ತವ್ಯ ಲೋಪ ಪೊಲೀಸರ ಅಮಾನತು

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಮಾರೀಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಹೆಡ್ ಕಾನ್ಸಟೇಬಲ್ ಬಿ.ಎನ್.‌ ಬಳಗಣ್ಣವರ, ಆರ್.ಎಸ್. ತಳೇವಾಡ ಎಂಬ ಪೇದೆಗಳನ್ನು ಅಮಾನತು ಮಾಡಲಾಗಿದೆ. ಸುಳೇಭಾವಿ ಗ್ರಾಮದ ಬೀಟ್ ಪೊಲೀಸರಾಗಿದ್ದ ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದಾರೆ.‌ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ಅಕ್ಟೋಬರ್ 6ರಂದು ರಾತ್ರಿ ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಎಂಬುವವರನ್ನು ಹತ್ಯೆ ಗ್ಯಾಂಗ್‌ವೊಂದು ಅಟ್ಟಾಡಿಸಿ ಹತ್ಯೆಗೈದಿತ್ತು. ಘಟನೆಗೂ ಎರಡು ದಿನಗಳ ಮುನ್ನ ಎರಡು ಗ್ಯಾಂಗ್‌ಗಳ ನಡುವೆ ಗಲಾಟೆಯಾದ ವಿಚಾರ ಗೊತ್ತಿದ್ರೂ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ ಆರೋಪವಿದೆ.

Previous articleʻಟಿಪ್ಪು ಎಕ್ಸಪ್ರೆಸ್’ ಹೆಸರು ಕೈ ಬಿಟ್ಟ ರೇಲ್ವೆ ಸಚಿವಾಲಯ
Next articleಅರ್ಕಾವತಿ ಹಗರಣ ಬಯಲಿಗೆಳೆಯಲಿದೆ ಸರ್ಕಾರ: ಕಟೀಲ್