ಜೀವಂತ ನಾಗರ ಹಾವಿಗೆ ಜಲಾಭಿಷೇಕ, ಆರತಿ

0
24

ಕಾಪು: ಮಜೂರಿನಲ್ಲಿ ನಾಗರ ಪಂಚಮಿಯ ಪ್ರಯುಕ್ತ ಜೀವಂತ ನಾಗರ ಹಾವಿಗೆ ಜಲಾಭಿಷೇಕ ಮತ್ತು ಆರತಿ ಕಾರ್ಯಕ್ರಮ ಸೋಮವಾರ ಬೆಳಗ್ಗೆ ನಡೆಸಲಾಯಿತು.
ಮಜೂರಿನ ಉರಗ ತಜ್ಞ ಗೋವರ್ಧನ್ ಭಟ್ ರವರು ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಿಕ್ಷಾ ಅಡಿಗೆ ಬಿದ್ದ ಹಾವನ್ನು ರಕ್ಷಿಸಿ, ಶುಶ್ರೂಷೆ ನೀಡುತ್ತಿದ್ದಾರೆ. ಮತ್ತೊಂದು ಹಾವನ್ನು ನಾಯಿ ಕಚ್ಚಿ ಗಾಯಗೊಳಿಸಿತ್ತು. ಎರಡು ಹಾವುಗಳಿಗೆ ಗೋವರ್ಧನ್ ಭಟ್ ರವರು ಶುಶ್ರೂಷೆ ನೀಡುತ್ತಿದ್ದಾರೆ. ಆ ಹಾವುಗಳಿಗೆ ಇಂದು ಜಲಾಭಿಷೇಕ ನೆರವೇರಿಸಿ ಆರತಿ ಎತ್ತಿದ್ದಾರೆ.
ಈ ಸಂದರ್ಭ ಗೋವರ್ಧನ್ ಭಟ್ ರವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Previous articleದೇಶವಿರೋಧಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ
Next articleಬಿಜೆಪಿ ಬಿಡಲ್ಲ ಎಂದು ರಕ್ತದಲ್ಲಿ ಬರೆಯುತ್ತೇನೆ