ಬಾಣಂತೀಯರ ಸಾವಿನ ವಿಚಾರದಿಂದ ಕುಖ್ಯಾತಿ ಪಡೆದಿದ್ದ ಜಿಲ್ಲಾ ಆಸ್ಪತ್ರೆ, ಈಗ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆ ನೌಕರರ ಭದ್ರತೆ ವಿಚಾರದಲ್ಲೂ ಕಪ್ಪು ಚುಕ್ಕೆ
ಬಳ್ಳಾರಿ: ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಂಶ ಬೆಳಕಿಗೆ ಬಂದಿದೆ.
ಮೊನ್ನೆವರೆಗೂ ಬಾಣಂತೀಯರ ಸಾವಿನ ವಿಚಾರದಿಂದ ಕುಖ್ಯಾತಿ ಪಡೆದಿದ್ದ ಜಿಲ್ಲಾ ಆಸ್ಪತ್ರೆ, ಈಗ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆ ನೌಕರರ ಭದ್ರತೆ ವಿಚಾರದಲ್ಲೂ ಕಪ್ಪು ಚುಕ್ಕೆಗೆ ಗುರಿಯಾಗಿದೆ. ಆಸ್ಪತ್ರೆಯಲ್ಲಿ ಆಡಳಿತ ವಿಭಾಗದ ಅಧೀಕ್ಷಕನಾಗಿರುವ ವಿ.ಕೆ.ವೆಂಕಟೇಶ್ ಅವರಿಂದ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಮದುವೆಯಾಗಿದೆ ಎಂದು ಆಳಲು ತೋಡಿಕೊಂಡ್ರು ಬಿಡದ ಕಾಮುಖ ವೆಂಕಟೇಶ್. ಸಂತ್ರಸ್ತ ಮಹಿಳೆಯ ಹಲವು ಸಲುಗೆಯ ಪೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಬೇದರಿಕೆ ಹಾಕಿದ್ದಾನೆ ಎನ್ನಲಾಗಿದೆ.ನಗರದ ಹೊರವಲಯದ ರೇಡಿಯೋ ಪಾರ್ಕ್ ಬಳಿ ಇರುವ ಲೇಔಟ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಸರಿಸುಮಾರು 05/03/2022 ರಿಂದ 25/12/2024 ನಿರಂತರ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.