ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣು

0
14

ನಾಗಮಂಗಲ: ಕಲ್ಲು ಬಂಡೆಯ ಕ್ವಾರೆ ಕೆಲಸಕ್ಕಾಗಿ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ೪ಗಂಟೆಯ ಸುಮಾರಿನಲ್ಲಿ ಸಂಭವಿಸಿದೆ.
ಬಸವೇಶ್ವರನಗರದ ಚಾಮುಂಡಿ ಎಂಬುವರ ಮಗ ರಾಮಚಂದ್ರ(೨೧) ಆತ್ಮಹತ್ಯೆಗೆ ಶರಣಾದವ. ಕಾಳೇನಹಳ್ಳಿ ಗ್ರಾಮದ ಅಪ್ರಾಪ್ತೆಯೋರ್ವಳನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯ ಮನೆ ಮುಂಭಾಗವೇ ಬಂಡೆ ಸಿಡಿಸುವ ಸ್ಫೋಟಕ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಫೋಟಕದ ತೀವ್ರತೆಗೆ ಯುವಕನ ದೇಹ ಛಿದ್ರವಾಗಿದೆ.
ಕಳೆದ ವರ್ಷ ೧೮ ವರ್ಷ ಪೂರೈಸದ ಇದೇ ಅಪ್ರಾಪ್ತೆಯ ಜೊತೆಗೂಡಿ ಮನೆ ಬಿಟ್ಟು ಹೋಗಿದ್ದ ಸಂಬಂಧ ಯುವಕನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಜೈಲುವಾಸದಿಂದ ಜಾಮೀನಿನ ಮೇಲೆ ಹೊರ ಬಂದಿದ್ದ ಯುವಕನಿಗೆ ಪ್ರೀತಿಸುತ್ತಿದ್ದ ಯುವತಿಗೆ ಮತ್ತೊಂದು ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದ ವಿಷಯ ತಿಳಿದು ಯುವತಿಯ ಮನೆ ಬಳಿ ಹೋಗಿ ಈ ರೀತಿ ಸ್ವಯಂ ಸ್ಫೋಟಕ ಸಿಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸುದ್ದಿಗರರೊಂದಿಗೆ ಮಾತನಾಡಿದ ಅವರು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬರುತ್ತಿದ್ದರೂ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕೆಪಿಎಸ್‌ಸಿ ಮತ್ತೆ ಎಡವಟ್ಟು: ತಾಳೆಗೆ ಸಿಗದ ಹಾಲ್ ಟಿಕೆಟ್-ಒಎಂಆರ್
Next articleಭೀಕರ ರಸ್ತೆ ಅಪಘಾತ:‌ ಸ್ಥಳದಲ್ಲಿ ಇಬ್ಬರು ಸಾವು