ಜಾರಕಿಹೊಳಿಯಿಂದ ಮತದಾರರಿಗೆ ಅವಮಾನ

0
110
surjewala

ಮಂಗಳೂರು: ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಮತದಾರರನ್ನು ಆರು ಸಾವಿರ ರೂ.ಗೆ ಖರೀದಿಸುವುದಾಗಿ ಹೇಳಿರುವುದು ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಅವಮಾನ, ಅವರ ಹೇಳಿಕೆಯ ಹಿನ್ನೆಲೆ ಗಮನಿಸಬೇಕಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರಿಗೆ ೬ ಸಾವಿರ ರೂ. ನೀಡಲು ಎಲ್ಲಿಂದ ಹಣ ಬರುತ್ತದೆ? ೪೦ ಪರ್ಸೆಂಟ್ ಕಮಿಷನ್ ದಂಧೆಯಿಂದ ಬರುತ್ತಿದೆಯಾ? ಚುನಾವಣಾ ಆಯೋಗವು ತಕ್ಷಣ ರಮೇಶ್ ಜಾರಕಿಹೊಳಿ, ಜೆಪಿ ನಡ್ಡಾ, ನಳಿನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿ ವಿರುದ್ಧ ಪ್ರಕರಣ ದಾಖಲಿಸಬೇಕು. ಐಪಿಸಿ ಸೆಕ್ಷನ್ ಅಡಿಯಲ್ಲಿ ಇವರನ್ನು ಬಂಧಿಸಬೇಕು. ಜನತಾ ನ್ಯಾಯಾಲಯದಲ್ಲೂ ಇವರಿಗೆ ಶಿಕ್ಷೆಯಾಗಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದರು.

Previous articleಫೆ. 5ರಿಂದ ಕರಾವಳಿ ಮಲೆನಾಡು ಧ್ವನಿ ಯಾತ್ರೆ
Next articleನ್ಯಾಯಾಂಗ ಚಿತ್ತ- ಇದು ಹೊಸ ಬೆಳಕಿನ ತುಡಿತ