Home Advertisement
Home ನಮ್ಮ ಜಿಲ್ಲೆ ಕೋಲಾರ ಜಾತಿಗಣತಿ ಬಗ್ಗೆ ಮಾತನಾಡುವ ಯೋಗ್ಯತೆ ಬಿಜೆಪಿಗಿಲ್ಲ

ಜಾತಿಗಣತಿ ಬಗ್ಗೆ ಮಾತನಾಡುವ ಯೋಗ್ಯತೆ ಬಿಜೆಪಿಗಿಲ್ಲ

0
137

ಕೋಲಾರ: ಜಾತಿಗಣತಿ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ, ಅವರಿಗೆ ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯುಕ್ತಿಕವಾಗಿ ಜಾತಿಗಣತಿ ಸರಿಯಿದೆ. ಇಷ್ಟು ದಿನ ಬಿಜೆಪಿಯವರು ಜಾತಿಗಣತಿ ಫ್ರೀಜರ್‌ನಲ್ಲಿದೆ ಎಂದು ಮಾತನಾಡುತ್ತಿದ್ದರು. ಆದರೆ ಈಗ ಜಾತಿಗಣತಿಗೆ ವಿರೋಧವಾಗಿ ಮಾತನಾಡುವುದು ಸರಿಯಲ್ಲ. ಬಿಜೆಪಿಯವರಿಗೆ ಮಾಡುವ ಯೋಗ್ಯತೆ ಇಲ್ಲ, ಏನಾದರೂ ಮಾಡಿದ್ರೆ ಸಹಿಸಿಕೊಳ್ಳಲ್ಲ. ಆದರೆ 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ ಎಂದರು.