ಜನಶತಾಬ್ದಿ ರೈಲುಗಳಿಗೆ ತಿಪಟೂರು ನಿಲ್ದಾಣದಲ್ಲಿ ನಿಲುಗಡೆ

0
37

ಬೆಂಗಳೂರು: ಜನ ಶತಾಬ್ದಿ ರೈಲುಗಳಿಗೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹುಬ್ಬಳ್ಳಿ – ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12079/80) ಹಾಗೂ ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12089/90) ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ನೀಡಬೇಕೆಂಬುದು ತಿಪಟೂರು ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ. ಇದೀಗ ತಿಪಟೂರು ಜನತೆಯ ಬೇಡಿಕೆ ಈಡೇರಿಸಲಾಗಿದ್ದು, ಈ ಮೇಲ್ಕಂಡ ಎರಡೂ ಜನ ಶತಾಬಿ ರೈಲುಗಳು ತಿಪಟೂರಿನಲ್ಲಿ ನಿಲುಗಡೆ ನೀಡಲಿವೆ. ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರುತ್ತೇನೆ ಎಂದಿದ್ದಾರೆ.

Previous articleಪಂಚಮಸಾಲಿಗೆ 2ಎ ಮೀಸಲಾತಿ: ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ
Next articleಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ