ಜಗತ್ತನ್ನು ಇಸ್ಲಾಮೀಕರಣಗೊಳಿಸುವುದೇ `ಲವ್ ಜಿಹಾದ್’

0
40

ಶಿವಮೊಗ್ಗ: ದೇಶ ಹಾಗೂ ಜಗತ್ತನ್ನು ಇಸ್ಲಾಮೀಕರಣಗೊಳಿಸಲು ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯ ಭಾಗವೇ ಲವ್ ಜಿಹಾದ್'. ಇಲ್ಲಿ ನಿಜವಾದ ಪ್ರೀತಿ ಇಲ್ಲ. ಇದೊಂದು ಷಡ್ಯಂತ್ರ, ಕುತಂತ್ರ ಜಾಲ. ಹಿಂದೂ ಸಮಾಜ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಬುಧವಾರ ಪತ್ರಿಕಾ ಭವನದಲ್ಲಿಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಷಡ್ಯಂತ್ರದ ಬಗ್ಗೆ ಹಿಂದೂ ಸಮಾಜದ ಹೆಣ್ಣುಮಕ್ಕಳು ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಹಿಂದೂಗಳ ನೈತಿಕತೆ ಕುಸಿಯಲು ಮಾತೃ ದೇವೋಭವ ವಾಕ್ಯವನ್ನು ವಿಕೃತಿಗೊಳಿಸಲು ವೇಶ್ಯಾವಾಟಿಕೆಗಾಗಿ, ಭಯೋತ್ಪಾದನೆಗಾಗಿ ಮಾದಕ ವಸ್ತು ಸಾಗಾಣಿಕೆಗಾಗಿ, ಹನಿಟ್ರ್ಯಾಪ್‌ಗಾಗಿ ಸುಳ್ಳು ಪ್ರೀತಿ, ಮೋಸ, ಷಡ್ಯಂತ್ರ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಹಿಂದೂಗಳ ಹೆಸರಿನಲ್ಲಿ ಶೇ. ೬೨ರಷ್ಟು ಲವ್ ಜಿಹಾದ್‌ಗಳು ಆಗಿದ್ದು, ಬುರ್ಖಾ ಹಾಕದೇ ಇರುವುದಕ್ಕೆ, ನಮಾಜ್ ಮಾಡದೇ ಇರುವುದಕ್ಕೆ, ಗೋಮಾಂಸ ತಿನ್ನದೇ ಇರುವುದಕ್ಕೆ ಶೇ. ೮೧ರಷ್ಟು ಕೊಲೆಗಳಾಗಿವೆ. ೨೦೨೨-೨೩ರಲ್ಲಿ ೧೫೩ ಬರ್ಬರ ಕೊಲೆಗಳಾಗಿದ್ದು, ೪೩೬ ಲವ್ ಜಿಹಾದ್ ಕೇಸ್‌ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
೨೦೧೯ರಿಂದ ೨೧ರವರೆಗೆ ದೇಶದಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಒಟ್ಟು ೧೩.೧೩ ಲಕ್ಷ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೨,೫೧,೪೩೦ ಅಪ್ರಾಪ್ತರಿದ್ದಾರೆ ಎಂದು ಪಾರ್ಲಿಮೆಂಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Previous articleಸಮುದ್ರಕ್ಕೆ ಬೋಟ್‌ನಲ್ಲಿ ತೆರಳಿ ಪ್ರತಿಭಟನೆ
Next articleಬೆಳಗಾವಿ ಪಾಲಿಕೆ, ಅಧಿಕಾರಿಗೆ ಬೆದರಿಕೆ