ಜ.10 ರಿಂದ 18 ದಿನಗಳ ಕಾಲ ಕಟ್ಟು ಪದ್ದತಿಯಲ್ಲಿ ನೀರು

0
21

92 ವರ್ಷಗಳ ನಂತರ 156 ದಿನಗಳ ಕಾಲ ಕೆ.ಆರ್.ಎಸ್. ಅಣೆಕಟ್ಟು 124.48 ಅಡಿ ತುಂಬಿದೆ

ಮಂಡ್ಯ: ಕೆ.ಆರ್.ಎಸ್‌ ನಿಂದ ಬೆಳೆಗಳಿಗೆ ಜನವರಿ 10 ರಿಂದ 18 ದಿನಗಳು ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ಕೆ.ಆರ್.ಎಸ್‌ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಇತಿಹಾಸದಲ್ಲಿ ಇದೇ ಮೊದಲು 92 ವರ್ಷಗಳ ನಂತರ 156 ದಿನಗಳ ಕಾಲ ಕೆ.ಆರ್.ಎಸ್. ಅಣೆಕಟ್ಟು 124.48 ಅಡಿ ತುಂಬಿದೆ. ಇದು ಟೀಕೆ ಟಿಪ್ಪಣಿ ಮಾಡುವವರಿಗೆ ಉತ್ತರ ನೀಡಿದೆ. ಜುಲೈ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೂ ಬೆಳೆಗಳಿಗೆ ನಿರಂತರವಾಗಿ ನೀರು ನೀಡಲಾಗಿದೆ, ಜಿಲ್ಲೆಯ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ಕೊನೆಯ ಭಾಗಕ್ಕೂ ನೀರು ಹರಿಸಲಾಗುವುದು. ರೈತರು ಅಲ್ಪವಧಿ ಬೆಳೆಗಳ ನಾಟಿ ಕೆಲಸವನ್ನು ಪ್ರಾರಂಭಿಸಬೇಕು, ಕೃಷಿ ಹಾಗೂ ನೀರಾವರಿ ಇಲಾಖೆ ಸಹಕಾರದೊಂದಿಗೆ ರೈತರು ಎರಡು ಬೆಳೆಗಳನ್ನು ಬೆಳೆಯಬೇಕು. ಇಲಾಖೆಗಳು ನೀಡುವ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು ಎಂದರು.

Previous articleನಕ್ಸಲ್ ಚಟುವಟಿಕೆ ಇತಿಹಾಸಕ್ಕೆ ಕೊನೆ ಹಾಡುವ ಕ್ಷಣ ಸನ್ನಿಹಿತ
Next articleಅರಣ್ಯ ಅಪರಾಧ ತಡೆಯಲು ಗರುಡಾಕ್ಷಿ ಆನ್‌ಲೈನ್‌