ತಮಿಳು ಚಿತ್ರರಂಗದ ನಟ ಶಿಹಾನ್ ಹುಸೈನಿ ಇಂದು ನಿಧನರಾಗಿದ್ದಾರೆ.
ಕರಾಟೆ ಲೆಜೆಂಟ್(ತಜ್ಞ) ಎಂದೇ ಹೆಸರುವಾಸಿಯಾಗಿದ್ದ ಅವರು ಸಾಕಷ್ಟು ತಮಿಳು ಸಿನಿಮಾಗಳಲ್ಲಿ ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಅದಷ್ಟೇ ಅಲ್ಲ, ಹಾಲಿವುಡ್ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಕಮಲ್ ಹಾಸನ್, ರಜನಿಕಾಂತ್, ದಳಪತಿ ವಿಜಯ್ ಸಿನಿಮಾಗಳಲ್ಲಿ ಶಿಹಾನ್ ನಟಿಸಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರ ನಿಧನದ ವಿಚಾರವನ್ನು ಅಧಿಕೃತವಾಗಿ ನಟನ ಕುಟುಂಬಸ್ಥರು ತಿಳಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ನಟನ ಪಾರ್ಥಿವ ಶರೀರ ಸಂಜೆಯವರೆಗೆ ಬೆಸೆಂಟ್ ನಗರದಲ್ಲಿರುವ ನಿವಾಸದಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಬಳಿಕ ಶಿಹಾನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ.