ಚಿಕ್ಕಮಗಳೂರು: ತಂತಿ ಬೇಲಿಗೆ ಸಿಲುಕಿದ ಚಿರತೆ

0
52

ಚಿಕ್ಕಮಗಳೂರು: ತಂತಿ ಬೇಲಿಗೆ ಸುತ್ತಿಕೊಂಡು ಚಿರತೆಯೊಂದು ನರಳಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆಯಲ್ಲಿ ನಡೆದಿದೆ.
ಬೇಲಿ ದಾಟುವಾಗ ತಂತಿಯಲ್ಲಿ ಚಿರತೆ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಚಿರತೆಯ ಹೊಟ್ಟೆಯನ್ನು ತಂತಿ ಬೇಲಿ ಸೀಳಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ. ಅಧಿಕಾರಿಗಳು ಹಾಗೂ ಜನರನ್ನು ಕಂಡ ಚಿರತೆ ಆಕ್ರೋಶಗೊಂಡಿದೆ.
ಶಿವಮೊಗ್ಗದ ಅರವಳಿಕೆ ತಜ್ಞರ ತಂಡ ಆಗಮಿಸುತ್ತಿದ್ದು, ಅವರು ಆಗಮಿಸಿದ ಬಳಿಕ ಅಧಿಕಾರಿಗಳು ಮುಂದಿನ ಕ್ರಮವಹಿಸಲಿದ್ದಾರೆ. ಚಿರತೆ ಸಿಲುಕಿಕೊಂಡಿರುವ ಸ್ಥಳಕ್ಕೆ ಹೋಗಲು ಅರಣ್ಯಾಧಿಕಾರಿಗಳು ಹಿಂದೇಟು ಹಾಕಿದ್ದಾರೆ.

Previous articleಬಾಗಲಕೋಟೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ: ನವನಗರ ಮತ್ತೆ ಉದ್ವಿಗ್ನ..!
Next articleಸಾಲ ನೀಡುವ ಬ್ಲೇಡ್ಆ್ಯಪ್‌ಗಳ ನಿಗ್ರಹ ಅಗತ್ಯ