ಊಟಿ: ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಊಟಿಯ ಪ್ರಸಿದ್ಧ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು ಊಟಿಯಲ್ಲಿರುವ ಈ ಪ್ರಸಿದ್ಧ ಕಾರ್ಖಾನೆಯನ್ನು ಎಪ್ಪತ್ತು ಜನ ಮಹಿಳೆಯರ ಗುಂಪು ನಡೆಸುತ್ತದೆ. ಮಹಿಳಾ ಸಬಲೀಕರಣಕ್ಕಾಗಿ ಇಂತಹ ಸಣ್ಣ ಉದ್ಯಮಗಳು ಒಂದು ಅರ್ಥಪೂರ್ಣ ಉದಾಹರಣೆಯಾಗಿದೆ ಎಂದಿದ್ದಾರೆ.