ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರೇ ಅಡ್ಡಿ

0
20

ಬೆಳಗಾವಿ: ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆ ಮತ್ತು ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಪ್ರಥಮ ಮಹಿಳೆ ವೀರರಾಣಿ ಚನ್ನಮ್ಮಳ ಪ್ರತಿಮೆ ಸ್ಥಾಪನೆಗೆ ಪೊಲೀಸರೇ ಅಡ್ಡಿ ಮಾಡಿರುವ ಘಟನೆ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಗಡಿನಾಡ ಬೆಳಗಾವಿಯ ಧಾಮಣೆ ಬಳಿಯ ಕುರುಬರಹಟ್ಟಿಯಲ್ಲಿ ನಡೆದಿದೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಪಂಚಾಯತಿ ವ್ಯಾಪ್ತಿಯಲ್ಲಿವೀರರಾಣಿ ಚನ್ನಮ್ಮನ ಪ್ರತಿಮೆಯನ್ನು ಪ್ರತಿಷ್ಠಾಪಸಿಲು ಮುಂದಾಗಿದ್ದರು,
ಈ ಸಂದರ್ಭದಲ್ಲಿ ಪೊಲೀಸರು ಅದಕ್ಕೆ ಅಡ್ಡಿ ಮಾಡಿದರು. ಒಂದು ಹಂತದಲ್ಲಿ ಗ್ರಾಮಸ್ಥರು ಕಳಕಳಿಯ ಮನವಿ ಮಾಡಿಕೊಂಡರೂ ಕೇಳದ ಪೊಲೀಸರ ಅತಿರೇಕದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಒಂದು ಹಂತದಲ್ಲಿ ಗ್ರಾಮಸ್ಥರ ಮನವಿಯನ್ನು ಧಿಕ್ಕರಿಸಿ ಚನ್ನಮ್ಮನ ಮೂರ್ತಿಯನ್ನು ವಶಕ್ಕೆ ಪಡೆಯಲು ಮುಂದಾದಾಗ ಗ್ರಾಮಸ್ಥರು ವಾಗ್ವಾದ ನಡೆಸಿದರು.
ಇಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಪಾರ್ಶ್ವವಾಯು ತಂದೆಯನ್ನು ಎಳೆದಾಡಿ
ಪೊಲೀಸ್ ವಾಹನದಲ್ಲಿ ಕೂರಿಸಿದ್ದರು. ಆಗ ಅವರನ್ನು ಬಿಡಿಸಲು ಹೋಗಿದ್ದ ನನ್ನನ್ನು ಕಾಲೇಜು ವಿದ್ಯಾರ್ಥಿ ಎನ್ನುವುದನ್ನೂ ನೋಡದೇ ಹಲ್ಲೆ ಮಾಡಿದರು ಎಂದು ದೂರಲಾಗಿದೆ.
ಅಷ್ಟೇ ಅಲ್ಲ ನನ್ನ ಭವಿಷ್ಯ ಹಾಳು ಮಾಡುವುದಾಗಿ ಹೇಳಿ ಪೊಟೊ ತೆಗೆದುಕೊಂಡು ಹೋಗಿದ್ದಾರೆಂದು ವಿದ್ಯಾರ್ಥಿನಿ ದೂರಿದ್ದಾರೆ,
ಆದರೆ ನನ್ನ ಭವಿಷ್ಯ ಹಾಳಾದೂ ಸಹ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಆಗಲೇಬೇಕು ಎಂದ ವಿದ್ಯಾರ್ಥಿನಿ ವಾದ ಮಾಡಿದ್ದಾಳೆ.
ಪೊಲೀಸರ ಈ ಕ್ರಮದ ವಿರುದ್ಧ ಈಗ ಕನ್ನಡಿಗರಲ್ಲಿ ಆಕ್ರೋಶದ ಕಿಚ್ಚು ಹೆಚ್ಚಾಗತೊಡಗಿದೆ.


ಕಾನೂನು ಬಾಹಿರ ಪ್ರತಿಷ್ಠಾಪನೆ
ಪೊಲೀಸ್ ಆಯುಕ್ತರ ಸ್ಪಷ್ಟನೆ

ಬೆಳಗಾವಿ: ತಾಲುಕಿನ ಕುರುಬರಹಟ್ಟಿ ಗ್ರಾಮದಲ್ಲಿ ವೀರರಾಣಿ ಚನ್ನಮ್ಮನ ಮೂರ್ತಿಯನ್ನು ಅನುಮತಿ ಇಲ್ಲದೇ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಹೀಗಾಗಿ ಅದನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಿದ್ರಾಮಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯಾರ ಮೇಲೂ ಪೊಲೀಸರು ಕೈ ಮಾಡಿಲ್ಲ. ಹಲ್ಲೆ ಮಾಡಿಲ್ಲ ಎಂದು ಅವರು ಸಂಯಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ.

Previous articleಆರು ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ
Next articleನೇಯ್ಗೆ ಬಂದ್: ಮತ್ತೇ ಅತಂತ್ರದಲ್ಲಿ ಕೈಮಗ್ಗ ನೇಕಾರ