Home Advertisement
Home ಅಪರಾಧ ಗ್ಯಾಸ್ ಸಿಲಿಂಡ‌ರ್ ತುಂಬಿದ್ದ ಲಾರಿ ಮರಕ್ಕೆ ಡಿಕ್ಕಿ: ತಪ್ಪಿದ ಬಾರಿ ಅನಾಹುತ

ಗ್ಯಾಸ್ ಸಿಲಿಂಡ‌ರ್ ತುಂಬಿದ್ದ ಲಾರಿ ಮರಕ್ಕೆ ಡಿಕ್ಕಿ: ತಪ್ಪಿದ ಬಾರಿ ಅನಾಹುತ

0
180

ನಿಪ್ಪಾಣಿಯಿಂದ ದಾಂಡೇಲಿಗೆ ತೆರಳುತ್ತಿದ್ದ, ಗ್ಯಾಸ್ ಸಿಲಿಂಡರ್‌ ತುಂಬಿದ್ದ ಲಾರಿ

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ.
ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಬರುವ ಆಲೂರು- ಕರ್ಕಾಳದ ರಸ್ತೆಯಲ್ಲಿ ಈ ಘಟನೆ ನಡೆದಿದೆ, ನಿಪ್ಪಾಣಿಯಿಂದ ದಾಂಡೇಲಿಗೆ ತೆರಳುತ್ತಿದ್ದ, ಗ್ಯಾಸ್ ಸಿಲಿಂಡರ್‌ ತುಂಬಿದ್ದ ಲಾರಿ ಬ್ರೇಕ್ ಫೇಲ್ ಆದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಟ್ರಕ್​ನಲ್ಲಿರುವ ಗ್ಯಾಸ್ ಸಿಲಿಂಡರ್‌ಗಳು ಸೋರಿಕೆಯಾಗಿಲ್ಲ. ಟ್ರಕ್​ನ ಬಾಗಿಲು ಮುರಿದು ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಚಾಲಕ ವಿನಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದಾಂಡೇಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚಾಲಕ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ನಿವಾಸಿಯಾಗಿದ್ದಾರೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಬಣ ರಾಜಕೀಯದ ಬಣ್ಣಗಳ ಅನಾವರಣ
Next articleನ್ಯೂಜಿಲೆಂಡ್‌ನ ಕರಾವಳಿಯಲ್ಲಿ 6.8 ತೀವ್ರತೆಯ ಭೂಕಂಪ