ಗೋಡೆ ಕುಸಿದು ಓರ್ವ ವ್ಯಕ್ತಿ ಸಾವು

0
10

ಚಿತ್ರದುರ್ಗ: ಗೋಡೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ಸಂಭವಿಸಿದ್ದು. ಕಳ್ಳಿಹಟ್ಟಿ ನಿವಾಸಿ ದೊರೆಸ್ವಾಮಿ(42) ಮೃತಪಟ್ಟವರೆಂದು ಗುರುತಿಸಲಾಗಿದೆ. ಹೊಸದುರ್ಗ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಹಳೆ ಗೋಡಾವೊಂದರ ದುರಸ್ತಿ ವೇಳೆ ಗೋಡೆ ಕುಸಿದಿದೆ ಎನ್ನಲಾಗಿದೆ. ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಕೆ.ಆರ್.ಎಸ್‌ನಲ್ಲಿ ಮುಂದುವರೆದ ಪ್ರತಿಭಟನೆ: ಮೈಸೂರು, ಕೊಡಗು‌ ರೈತರು ಸಾಥ್
Next article100ದಿನಗಳ ಯಶಸ್ವೀ ಪಯಣ: ಭವಿಷ್ಯದ ಮುನ್ನೋಟ