ಗೋ ರಕ್ಷಣೆಗೆ ತೆರಳಿದ ಸೋಮಶೇಖರ್ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ಬೆಲ್ಲದ ಆಗ್ರಹ

0
23

ಧಾರವಾಡ : ಪ್ರಾಣಿ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಧಾರವಾಡ ಉಪ ನಗರ ಪೊಲೀಸ್ ಠಾಣೆಯ ಎದುರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿ ಕೂಡಲೇ ಆರೋಪಿಗಳ ಬಂಧನ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸರು ಪಕ್ಷಪಾತ ಮಾಡದೇ ಜಿಹಾದಿ ಮುಸ್ಲಿಂ ಕಿಡಿಗೇಡಿಗಳ ಬಂಧನ ಮಾಡಬೇಕು. ಈ ಕುರಿತು ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Previous articleಜೋಶಿಗೆ ಅದ್ದೂರಿ ಸ್ವಾಗತ
Next articleಚಿತ್ರದುರ್ಗದಲ್ಲಿ ಮಧ್ಯರಾತ್ರಿ ಸ್ಥಳ ಮಹಜರು