ಗುರುಪುರ ಕಂಬಳದಲ್ಲಿ ದೂಜನ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ

0
25

ಮಂಗಳೂರು: ಗುರುಪುರ ಕಂಬಳೋತ್ಸವದಲ್ಲಿ ಪದವು-ಕಾನಡ್ಕ ತಂಡದ ಚಾಂಪಿಯನ್ ಕೋಣ ದೂಜನ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
ಮಂಗಳೂರು ತಾಲೂಕು ಗುರುಪುರದ ಮೂಳೂರು ಅಡ್ಡೂರು ಜೋಡುಕೆರೆ ಕಂಬಳ ಸಮಿತಿಯ ಆಶ್ರಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿನಾಯತ್ ಅಲಿ ನೇತೃತ್ವದಲ್ಲಿ ಆಯೋಜಿಸಲಾಗಿರುವ ದ್ವಿತೀಯ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳೋತ್ಸವದಲ್ಲಿ ಚಾಂಪಿಯನ್ ಕೋಣ ದೂಜನ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
ಈ ವರ್ಷದ ಕೊನೆಯ ಕಂಬಳ ಕೂಟ ವಾದ ಗುರುಪುರ ಮೂಳೂರು ಅಡ್ಡೂರು ಜೋಡಕೆರೆ ಕಂಬಳದ ಸಮರೂಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಕಂಬಳ ಸಮಿತಿಯ ವತಿಯಿಂದ ನೇಗಿಲು ಹಸ್ತಾಂತರಿಸಿ ಉಪಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು. ಗುರುಪುರ ಕಂಬಳೋತ್ಸವದಲ್ಲಿ ವಿಶೇಷ ಗಮನ ಸೆಳೆದಿದ್ದು 6 ಬಾರಿಯ ಚಾಂಪಿಯನ್ ಪಟ್ಟದೊಂದಿಗೆ 69 ಮೆಡಲ್ ಪಡೆದ ಚಾಂಪಿಯನ್ ದೂಜನ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
ವಿಶೇಷ ರೀತಿಯಲ್ಲಿ ಅಲಂಕೃತಗೊಂಡಿದ್ದ ದೂಜನಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮಸ್ಕರಿಸಿ ಗೌರವ ಸಲ್ಲಿಸಿದರು. ನಂತರ ದೂಜನ ಹೆಸರಿನಲ್ಲಿ ಕಂಬಳದ ಅಂಚೆ ಚೀಟಿ ಬಿಡುಗಡೆ ಮಾಡಿದರು.

Previous articleಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕಬೀರ್‌ಖಾನ್ ಬಂಧನ
Next articleಬಿಜೆಪಿ ಮುಖಂಡರು ಪಶ್ಚಾತಾಪ ಯಾತ್ರೆ ಮಾಡಲಿ