ಗುಟ್ಕಾ ತಂದುಕೊಡದ ಬಾಲಕಿ ಕೊಲೆ

0
28

ಕೊಪ್ಪಳ: ಗುಟ್ಕಾ ತಂದುಕೊಡಲು ನಿರಾಕರಿಸಿದ ಬಾಲಕಿಯನ್ನು ವ್ಯಕ್ತಿಯೊಬ್ಬ ಕೋಲಿನಲ್ಲಿ ಹೊಡೆದು ಕೊಂದಿರುವ ಪ್ರಕರಣ ಕಿನ್ನಾಳದಲ್ಲಿ ಬೆಳಕಿಗೆ ಬಂದಿದೆ.
ಸಿದ್ದಲಿಂಗಯ್ಯ ನಾಯಕಲ್(೫೦) ಆರೋಪಿಯಾಗಿದ್ದು, ಪಕ್ಕದ ಮನೆಯ ಅನುಶ್ರೀ ಮಡಿವಾಳರ್(೭) ಎನ್ನುವ ಬಾಲಕಿಯನ್ನು ಸಿಟ್ಟಿನಿಂದ ಊರುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಶ್ರೀ ಏಪ್ರಿಲ್ ೧೯ರಂದು ಕಾಣೆಯಾಗಿದ್ದಳು. ಮನೆಯವರ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಸಿದ್ದಲಿಂಗಯ್ಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Previous articleದರ್ಶನ್ ಮನುಷ್ಯನೊ… ರಾಕ್ಷಸನೋ…?
Next articleಗೃಹಿಣಿಯರ ಆರೋಗ್ಯಕ್ಕೆ ಎಣ್ಣೆಗಳ ಉಪಯೋಗ