ಯಾದಗಿರಿ : ಹಳೇದ್ವೇಷ ಹಿನ್ನಲೆ ದಲಿತ ಮುಖಂಡನ ಬರ್ಬರ ಕೊಚ್ಚಿ ಕೊಲೆ ಮಾಡಿರುವ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಾದ್ಯಾಪೂರದ ಬಳಿ ನಡೆದಿದೆ
ಕಣ್ಣಿಗೆ ಖಾರದ ಪುಡಿ ಎರಚಿ ಜೋಡಿ ಹಳೆಯ ದ್ವೇಷ ಹಿನ್ನೆಲೆ ದಲಿತ ಮುಖಂಡ, ಆತನ ಜೊತೆಗಿದ್ದವನ ಕೊಲೆ ಮಾಡಿದ್ದಾರೆ
ದಲಿತ ಮುಖಂಡ ಮಾಪ್ಪಣ್ಣ ಮದ್ರಕ್ಕಿ(48) ಅಲಿಸಾಬ್ (50) ಕೊಲೆ ಯಾದ ವ್ಯಕ್ತಿಗಳು ಮದ್ರಕ್ಕಿ ಗ್ರಾಮದಿಂದ ಶಹಾಪೂರದತ್ತ ತರಕಾರಿ ತರಲು ಹೊರಟ್ಟಿದ್ದ ಮಾಪಣ್ಣ& ಅಲಿಸಾಬ್ ಬೈಕ್ ನಲ್ಲಿ ಶಹಾಪೂರದತ್ತ ಹೊರಟ್ಟಿದ್ದಾಗ ಈ ವೇಳೆ ಕಾರ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಅಟ್ಯಾಕ್ ಮಾಡಿ ಮಾಪ್ಪಣ್ಣನ ಸ್ಥಳದಲ್ಲಿಯೇ ದುಷ್ಕ್ರಮಿಗಳು ಈ ವೇಳೆ ಸ್ಥಳದಿಂದ ಓಡಿ ಹೋಗ್ತಿದ್ದ ಅಲಿಸಾಬ್ ನನ್ನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಇನ್ನೂ ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದ ಮೃತ ದೇಹಗಳನ್ನು ಶಹಾಪೂರ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ ಇದೇ ಕೊಲೆಯಾದವರ ಮನೆಯವರು ಆಸ್ಪತ್ರೆ ಮುಂಬಾಗ ಜಮಾವಣೆಗೊಂಡಿದ್ದಾರೆ.
ಘಟನಾ ಸ್ಧಳಕ್ಕೆ ಎಸ್ಪಿ ಭೇಟಿ: ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಲ್ನೋಟಕ್ಕೆ ಹಳೆಯ ವೈಷಮ್ಯ ಕಾಣುತ್ತಲಿದೆ.
2014ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಹುಸೇನಿ ಅವರ ಬಗ್ಗೆ ಅನುಮಾನವಿದೆ. ಈ ಬಗ್ಗೆ ˌ
ತಂಡವನ್ನು ರಚಿಸಿದೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ’ ಎಂದರು. ಜೋಡಿ ಕೊಲೆ ಘಟನೆಯಿಂದ
ಮದ್ರಿಕಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.