ಗಾಂಜಾ ದಂಧೆಕೋರರಿಂದ ಹಲ್ಲೆ: ನಾಳೆ ಸಿಪಿಐ ಏರ್‌ಲಿಫ್ಟ್

0
20
ಪೊಲೀಸರ ಮೇಲೆ ದಾಳಿ

ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾದ ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್‌ಲಿಫ್ಟ್ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇಲ್ಲಾಳ್‌ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದ್ದು, ಕೇರಳದ ಕೊಚ್ಚಿಯಿಂದ ಕಲಬುರಗಿ ಏರ್‌ಪೋರ್ಟ್‌ಗೆ ಏರ್ ಆಂಬುಲೆನ್ಸ್ ಆಗಮಿಸಿದೆ. ನಾಳೆ ಬೆಳಗ್ಗೆ 8ಗಂಟೆಗೆ ಸಿಪಿಐರನ್ನ ಏರ್‌ಲಿಫ್ಟ್ ಮಾಡುವ ಸಾಧ್ಯತೆ ಇದೆ. ಯುನೈಟೆಡ್ ಆಸ್ಪತ್ರೆಯಿಂದ ಏರ್‌ಪೋರ್ಟ್‌ವರೆಗೆ ಝಿರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ ಸಾಗಲು ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಕಲಬುರಗಿ ಏರ್‌ಪೋರ್ಟ್‌‌ನಿಂದ ಬೆಂಗಳೂರಿಗೆ ಏರ್ ಆಂಬುಲೆನ್ಸ್ ಮೂಲಕ ತೆರಳಲಿದ್ದಾರೆ.

ಏರ್ ಆಂಬುಲೆನ್ಸ್
Previous articleಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ: ಸಿಎಂ
Next article108 ಆಂಬ್ಯುಲೆನ್ಸ್ ಕರೆಗೆ ಪರ್ಯಾಯ ಕಂಟ್ರೋಲ್ ರೂಮ್ ಸ್ಥಾಪನೆ