Home Advertisement
Home ಅಪರಾಧ ಮಾವನ ಮನೆಗೆ ಊಟಕ್ಕೋಗಲು ಪೊಲೀಸ್‌ರಿಗೆ ಕರೆ ಮಾಡಿದ ಕಿಲಾಡಿ…

ಮಾವನ ಮನೆಗೆ ಊಟಕ್ಕೋಗಲು ಪೊಲೀಸ್‌ರಿಗೆ ಕರೆ ಮಾಡಿದ ಕಿಲಾಡಿ…

0
106

ಚಿಕ್ಕಮಗಳೂರು : ಪಿತೃ ಪಕ್ಷದ ಊಟಕ್ಕೆ ಹೋಗಲು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿಕೊಂಡ ಪ್ರಸಂಗ ನಡೆದಿದೆ.
112 ಗೆ ಫೋನ್ ಮಾಡಿ ಸರ್… ಗಲಾಟೆ ಬೇಗ ಬನ್ನಿ ಎಂದು ಮನವಿ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೋರಿದ್ದಾನೆ. ಗಾಡಿ ಯಾವು ಇಲ್ಲ… ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ದು, ಈ ಭೂಪನ ಪೋಕರಿ ನೋಡಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ… ನಗಬೇಕೋ… ತಿಳಿಯಲಿಲ್ಲ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ಆಗುತ್ತಿದೆ ಎಂದುತರುವೆ ಗ್ರಾಮದ ಅಶೋಕ್ ಪೊಲೀಸರಿಗೆ ಫೋನ್ ಮಾಡಿದ್ದಾನೆ.
ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್‌ಗೆ ಬುದ್ದಿವಾದ ಹೇಳಿದ ಪೊಲೀಸರು ಕೊನೆಗೆ ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನು ಮಾವನ ಮನೆಗೆ ಕಳಿಸಿದ್ದಾರೆ.

Previous articleಕನಿಷ್ಠ ವೇತನ ದರ ಹೆಚ್ಚಳ
Next articleತಿರುಪತಿ ಲಾಡು ವಿವಾದ: SIT ರಚಿಸಿದ ಸರ್ಕಾರ