ಗಣರಾಜ್ಯೋತ್ಸವದಲ್ಲಿ ಕೃಷಿ ಸಖಿಯಾಗಿ ಹೆಬ್ರಿಯ ಸುಗಂಧಿ ನಾಯ್ಕ್‌

0
116

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತಿಯ ಮುಳ್ಳುಗುಡ್ಡೆ ನಿವಾಸಿ ಸುಗಂಧಿ ನಾಯ್ಕ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಸಖಿಯಾಗಿ ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿ ಜ. 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ 12 ಮಹಿಳೆಯರು ಆಯ್ಕೆಯಾಗಿದ್ದು. ಸುಗಂಧಿ ನಾಯ್ಕ ಸಹಿತ ರಾಜ್ಯದ 8 ಮಂದಿ ಕೃಷಿ ಸಖಿ/ಪಶು ಸಖಿಯಾಗಿ ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಮತ್ತು ಸಂಜೀವಿನಿ ಸಂಘದ 4 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ. ಶಿವಪುರ ಗ್ರಾಮದ ಶಿವದುರ್ಗೆ ಸಂಜೀವಿನಿ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಸ್ಥರಿಗೆ ರೈತರಿಗೆ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 30ಎಕರೆ ಬರಡು ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

Previous articleಅನುದಾನದಲ್ಲಿ ಬಿಡಿಗಾಸು ಕೂಡ ಬಿಡುಗಡೆ ಆಗಿಲ್ಲ
Next articleಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ