Home Advertisement
Home ನಮ್ಮ ಜಿಲ್ಲೆ ಉಡುಪಿ ಗಂಡ-ಹೆಂಡತಿ ಜಗಳ ಸಾವಿನೊಂದಿಗೆ ಅಂತ್ಯ

ಗಂಡ-ಹೆಂಡತಿ ಜಗಳ ಸಾವಿನೊಂದಿಗೆ ಅಂತ್ಯ

0
113

ಕಾರ್ಕಳ: ಕ್ಷುಲ್ಲಕ ವಿಚಾರಕ್ಕಾಗಿ ದಂಪತಿಗಳ ಮಧ್ಯೆ ಜಗಳವಾಗಿದ್ದು ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಜೂ. ೨೫ರಂದು ಕಾರ್ಕಳ ತಾಲೂಕು ನಲ್ಲೂರಿನಲ್ಲಿ ನಡೆದಿದೆ.
ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ(40) ಹಾಗೂ ಯಶೋಧಾ(32) ಎಂಬವರೇ ಸಾವಿಗೀಡಾದ ದಂಪತಿ.
ಭಾನುವಾರ ಬೆಳಿಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾದವರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ.
ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ, ಪೊಲೀಸರಾದ ಪ್ರಕಾಶ್, ಸುಭಾಶ್ ಕಾಮತ್, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಶವ ಮೇಲಕ್ಕೆತ್ತಿದ್ದ ಸ್ಥಳೀಯರು:
ಗ್ರಾಮ ಪಂಚಾಯತ್ ಸದಸ್ಯರಾದ ಸುಮಿತ್ ನಲ್ಲೂರು ಹಾಗೂ ಲೋಕೇಶ್ ಶೆಟ್ಟಿ, ಸ್ಥಳೀಯರಾದ ಹರಿಪ್ರಸಾದ್ ಬಜಗೋಳಿ, ಶಿವಣ್ಣ ನಲ್ಲೂರು, ನಾರಾಯಣ ಗೌಡ ಅವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ನಲ್ಲೂರು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗೇಶ್, ಸ್ಥಳೀಯರಾದ ಜಯರಾಮ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ಘಟನಾ ಸ್ಥಳಕ್ಕಾಗಮಿಸಿದರು.