ಖ್ಯಾತ ಹಿರಿಯ ನಟ ಚಂದ್ರ ಮೋಹನ್ ವಿಧಿವಶ

0
10

ಬೆಂಗಳೂರು: ಹಿರಿಯ ನಟ ಚಂದ್ರ ಮೋಹನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
82ರ ವಯಸ್ಸಿನ ಚಂದ್ರಮೋಹನ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗಿ ವಿಧಿವಶರಾಗಿದ್ದಾರೆ. ಹಲವು ದಶಕಗಳಿಂದ ತೆಲಗು ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ವಿಶೇಷ ಮನ್ನಣೆ ಗಳಿಸಿರುವ ಹಿರಿಯ ನಟ ಚಂದ್ರಮೋಹನ್ ಅವರ ಅಗಲಿಕೆಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ. 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 1966ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ರಂಗುಲ ರತ್ನಂ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.

Previous articleಪರಿಸರಸ್ನೇಹಿ ಹಸಿರು ಕೃಷಿಗಾಗಿ ನ್ಯಾನೊ ಗೊಬ್ಬರಗಳು
Next articleಕನ್ನಡ ಬಾವುಟಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಅಭಿಯಾನ