Home Advertisement
Home ತಾಜಾ ಸುದ್ದಿ ಕ್ಷೇತ್ರದ ಅಭಿವೃದ್ಧಿಗೆ ಜನಾಶೀರ್ವಾದ: ಎಂ.ಆರ್. ಪಾಟೀಲ

ಕ್ಷೇತ್ರದ ಅಭಿವೃದ್ಧಿಗೆ ಜನಾಶೀರ್ವಾದ: ಎಂ.ಆರ್. ಪಾಟೀಲ

0
102

ಧಾರವಾಡ: ಕುಂದಗೋಳ ಕ್ಷೇತ್ರದ ಅಭಿವೃದ್ಧಿಗೆ ನಾನು ಯಾವುದೇ ಅಧಿಕಾರ ಇಲ್ಲದೇ ಇದ್ದಾಗೂ ಕೆಲಸ ಮಾಡಿದ್ದೆ. ನಮ್ಮ ಸರ್ಕಾರದಲ್ಲಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೆ. ಗುರುತಿಸಿ ಮತದಾರರು ಗೆಲ್ಲಿಸಿದ್ದಾರೆ ಎಂದು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ ಹೇಳಿದರು.
ಕ್ಷೇತ್ರದಲ್ಲಿ ಹಿಂದೆ ಅನೇಕ ಶಾಸಕರು ಆಗಿ ಹೋಗಿದ್ದಾರೆ. ಅಭಿವೃದ್ಧಿ ಮಾತ್ರ ಆಗಿರಲಿಲ್ಲ. ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡು ಆಯ್ಕೆ ಮಾಡಿದ ಪ್ರತಿನಿಧಿಗಳು ಕ್ಷೇತ್ರವನ್ನು ಉಪೇಕ್ಷೆ ಮಾಡಿದರು. ಅಧಿಕಾರ ಇಲ್ಲದೇ ಕೆಲಸ ಮಾಡಿದ ನನಗೆ ಅಶೀರ್ವಾದ ಮಾಡಿದ್ದಾರೆ ಎಂದರು.
ನಾನು ಈ ಹಿಂದಿನಿಂದಲೂ ಬಿಜೆಪಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದೆ ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಪಕ್ಷ ಟಿಕೆಟ್ ನೀಡಿತು. ಕ್ಷೇತ್ರದ ಕಾರ್ಯಕರ್ತರ ಪರಿಶ್ರಮ, ಜನರ ವಿಶ್ವಾಸ ಗೆಲುವು ತಂದಿತು ಎಂದರು.

Previous articleಶಾಮನೂರು ಶಿವಶಂಕರಪ್ಪ ಗೆಲುವು
Next articleಅಭಿವೃದ್ಧಿ ಕಾರ್ಯ ಗುರುತಿಸಿ ಜನ ಗೆಲ್ಲಿಸಿದ್ದಾರೆ: ಬೆಲ್ಲದ