ಕ್ರಿಕೆಟ್ ವಿಚಾರವಾಗಿ ಗಲಾಟೆ: ಓರ್ವ ಯುವಕನ ಕೊಲೆ

0
49

ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಯುವಕನೋರ್ವನ ಕೊಲೆಯಾಗಿದೆ. ಕ್ರಿಕೆಟ್ ಆಟ ಹಾಗೂ ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಭದ್ರಾವತಿಯ ಅಕ್ಮಹಾದೇವಿ ಶಾಲಾ ಮೈದಾನದಲ್ಲಿ ಅರುಣ ಮತ್ತು ಸಂಜಯ್ ನಡುವಿನ ಕ್ರಿಕೆಟ್ ಆಟ ನಡೆದಿದೆ. ಆಟದಲ್ಲಿ ಗಲಾಟೆಯಾಗಿದೆ. ನಂತರ ಈ ವಿಷಯವನ್ನ ಸಂಧಾನ ಮಾಡಿಸುವುದಾಗಿ ಕೇಶವಪುರ ಬಡಾವಣೆಯಲ್ಲಿ ಎಣ್ಣೆ ಪಾರ್ಟಿ ನಡೆದಿದೆ.

ಎಣ್ಣೆ ಪಾರ್ಟಿ ನಡೆಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಕೊಲೆಯಾಗಿದೆ. ಅರುಣ್ ಎಂಬ 23 ವರ್ಷದ ಯುವಕನನ್ನ ಕೊಲೆ ಮಾಡಲಾಗಿದೆ. ಇದೇ ವಿಚಾರದಲ್ಲಿ ಸಂಜಯ್‌ಗೂ ಗಾಯಗಳಾಗಿದ್ದು ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Previous articleಹಿಂದೂ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಿ
Next articleಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು