ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್

0
15

ತ್ವರಿತ ಕೋವಿಡ್ ವ್ಯಾಕ್ಸಿನ್ ‌ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ ಲಭಿಸಿದೆ ಆಧುನಿಕ ಕಾಲದ ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ಅಭೂತಪೂರ್ವ ಕಾಣಿಕೆಯನ್ನು ಮೆಂಸೆಂಜರ್ ಆರ್‌ಎನ್ಎ ನೀಡಿದೆ ಎಂದು ತೀರ್ಪುಗಾರರ ಸಮಿತಿ ಹೇಳಿದೆ. ಈ ಇಬ್ಬರು ವಿಜ್ಞಾನಿಗಳು ಕ್ರೂರಿ ‘ಕೊರೊನಾ’ ವಿರುದ್ಧ ಹೋರಾಡೋಕೆ ಎಂಆರ್‌ಎನ್‌ಎ (mRNA) ಲಸಿಕೆ ಸಂಶೋಧನೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದರು. ಇದೀಗ ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್‌ಮನ್‌ ಅವರ ಈ ಶ್ರಮವನ್ನ ಪರಿಗಣಿಸಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

Previous articleಡಿ.ಕೆ. ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ
Next articleಏಷ್ಯನ್‌ ಗೇಮ್ಸ್‌ನಲ್ಲಿ ಅದಿತಿ ಬೆಳ್ಳಿ ಸಾಧನೆ: ಸಿಎಂ ಅಭಿನಂದನೆ