ಕೊಲ್ಲೂರಿಗೆ ಭೇಟಿ ನೀಡಿದ ಇಳಯರಾಜ್

0
22

ಕುಂದಾಪುರ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ್ ಅವರು ಸೋಮವಾರ ಕೊಲ್ಲೂರು ದೇಗುಲಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದರು.
ಕೊಲ್ಲೂರು ದೇವಿಯ ಭಕ್ತರಾದ ಇಳಯರಾಜ್ ಅವರು ಪ್ರತಿವರ್ಷವೂ ಕೊಲ್ಲೂರಿಗೆ ಭೇಟಿ ನೀಡುತ್ತಾರೆ. ಈ ಭೇಟಿಯ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯ ರಘುರಾಮ ದೇವಾಡಿಗ ಆಲೂರು, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಹಿರಿಯ ಅರ್ಚಕ ಶ್ರೀಧರ್ ಅಡಿಗ ಮೊದಲಾದವರು ಇಳಯರಾಜ್ ಅವರನ್ನು ಗೌರವಿಸಿದರು.

Previous articleಲೋಕಾಯುಕ್ತ ಬಲೆಗೆ ಬಿದ್ದ ತಾಪಂ ಇಒ ಜೀಪ್ ಚಾಲಕ
Next articleಎಲ್ಲ ಜಿಲ್ಲೆಗಳಲ್ಲಿ ಸೀಮಂತ ಕಾರ್ಯಕ್ರಮ