ಕೈದಿ ಕಣ್ಣಿಗೆ ಇರಿತ

0
35

ಪಣಜಿ: ಗೋವಾದ ಕೊಲ್ವಾಳ ಕಾರಾಗೃಹದಲ್ಲಿ ಕೈದಿಯೊಬ್ಬನ ಕಣ್ಣಿಗೆ ಸೆಲ್‌ನಲ್ಲಿದ್ದ ಇತರ ಕೈದಿಗಳು ಪೆನ್ನಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.
ಕಾರಾಗೃಹದಲ್ಲಿ ತನ್ನ ಸೆಲ್‌ನಲ್ಲಿದ್ದ ಇತರ ಕೈದಿಗಳ ಬಗ್ಗೆ ಜೈಲು ಅಧಿಕಾರಿಗಳಿಗೆ ಕೈದಿ ಅಜೀಜ್ ಅಸೀಫ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ರಾತ್ರಿ ಮಲಗಿದಾಗ ಇತರ ಕೈದಿಗಳು ಪೆನ್ನಿನಿಂದ ಕಣ್ಣಿಗೆ ಇರಿದಿದ್ದಾರೆ ಎನ್ನಲಾಗಿದೆ. ಕಾರಾಗೃಹದ ಸೆಲ್‌ನಲ್ಲಿ ಗಾಯಗೊಂಡ ಈ ಕೈದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleಮಿನಿ ಟೆಂಪೋ ಪಲ್ಟಿ: ಓರ್ವ ಸಾವು
Next articleಭೀಮಾತೀರದ ಭಾಗಪ್ಪ ಹರಿಜನ ಅಂತ್ಯಕ್ರಿಯೆ