ಕೇವಲ ಘೋಷಣೆಗಳಿಗಷ್ಟೇ ಸೀಮಿತವಾದ ಬಜೆಟ್

0
33

ಬಜೆಟ್ ಎಂಬುದು ಕೇವಲ ಹಾಳೆಗಳ ಮೇಲಿನ ಅಕ್ಷರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಕಳೆದ ಎರಡು ವರ್ಷಗಳ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳ ಪಾಲಿಗೆ ಅಭಿವೃದ್ಧಿಯ ಘೋಷಣೆಯನ್ನೂ ಮಾಡಿಲ್ಲ, ಮಾಡಿದ ಅಲ್ಪ-ಸ್ವಲ್ಪ ಘೋಷಣೆಯನ್ನು ಅನುಷ್ಠಾನಕ್ಕೆ ತಂದಿಲ್ಲವೆಂದು ಶಾಸಕ ವೇದವ್ಯಾಸ ಕಾಮತ್‌ರವರು ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಪಾಲಿಗೆ ಬಜೆಟ್ ಎಂಬುದು ಕೇವಲ ಹಾಳೆಗಳ ಮೇಲಿನ ಅಕ್ಷರಗಳು ಅಷ್ಟೇ ಆದರೆ ಮುಖ್ಯಮಂತ್ರಿಗಳು ಗಂಟೆಗಟ್ಟಲೆ ನಿಂತು ಬಜೆಟ್ ಭಾಷಣ ಮಾಡುವುದು ಯಾಕೆ? ನಾವೆಲ್ಲ ಅದನ್ನು ಕೇಳಿಸಿಕೊಳ್ಳುವುದು ಯಾಕೆ? ಈ ಅಧಿವೇಶನ ಯಾಕೆ? ನನ್ನ ಬಳಿ 2023-24 ಹಾಗೂ 2024-25 ಸಾಲಿನ ಬಜೆಟ್‌ನಲ್ಲಿ ಇದೇ ಸರ್ಕಾರ ಮೀನುಗಾರಿಕೆಗೆ, ಪ್ರವಾಸೋದ್ಯಮಕ್ಕೆ, ವಾಣಿಜ್ಯ ಕ್ಷೇತ್ರಕ್ಕೆ ಸೇರಿದಂತೆ ಕೆಲವೇ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲೇ ಘೋಷಿಸಿರುವ ಪಟ್ಟಿ ಇವೆ. ಅವುಗಳಲ್ಲಿ ಯಾವುದನ್ನು ಸರ್ಕಾರ ಸಮರ್ಥವಾಗಿ ಅನುಷ್ಠಾನಗೊಳಿಸಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸರ್ಕಾರಕ್ಕೆ ಸವಾಲೆಸೆದರು.

ಸದ್ಯ ಕರಾವಳಿ ಜಿಲ್ಲೆಗಳ ಜನತೆ ಕೇವಲ ಘೋಷಣೆಗಳನ್ನು ಕೇಳಿಸಿಕೊಂಡು ಕುಣಿದು ಕುಪ್ಪಳಿಸಬೇಕಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗಿರುವುದು ದುರಂತವಾಗಿದ್ದು, ಕರಾವಳಿಯ ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ಶೂನ್ಯ ಸಂಪಾದನೆಯೇ ಈ ಸರ್ಕಾರದ ದೊಡ್ಡ ಸಾಧನೆ ಎಂದರು.

Previous articleಹಾಜರಾತಿ ಕೊರತೆ: ಹಾಲ್‌ಟಿಕೆಟ್ ಸಿಗದ ವಿದ್ಯಾರ್ಥಿಗಳ ಪ್ರತಿಭಟನೆ
Next articleಅಕ್ರಮ ಮದ್ಯ ಜಫ್ತಿ: 8 ಜನರ ಬಂಧನ