ಕೇವಲ 50 ರನ್‌ಗೆ ಕುಸಿದ ಲಂಕಾ

0
28

ಕೊಲಂಬೊ: ಮೊಹಮ್ಮದ ಸಿರಾಜ್‌ ಶಿಸ್ತುಬದ್ಧ ದಾಳಿಗೆ ಮಂಕಾದ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್‌ ಆಗಿದೆ.
ಏಷ್ಯಾ ಕಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ ಆರಂಭದಲ್ಲಿಯೇ ಆಘಾತಕ್ಕೊಳಗಾಗಿದ್ದು, ಎಲ್ಲ ಆಟಗಾರರು ಕೂಡ ಪೆವಿಲಿಯನ್‌ ಪರೇಡ್‌ ನಡೆಸಿದರು. ನಿಗದಿತ 50 ಓವರ್‌ಗಳ ಪಂದ್ಯದಲ್ಲಿ 15.2 ಓವರ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 50 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಭಾರತದ ಪರ ಮೊಹಮ್ಮದ್‌ ಸಿರಾಜ್‌ 21ರನ್‌ ನೀಡಿ 6 ವಿಕೆಟ್‌ ಕಬಳಿಸಿದರೆ, ಹಾರ್ದಿಕ್‌ ಪಾಂಡ್ಯಾ 3 ರನ್‌ ನೀಡಿ 3 ವಿಕೆಟ್‌ ಪಡೆದರು.

Previous article76ನೇ ಕಲ್ಯಾಣ ಕರ್ನಾಟಕ ಉತ್ಸವ
Next articleಹಣ ತಗೊಂಡು ಟಿಕೆಟ್‌ ಕೊಟ್ಟಿದ್ದಾರೋ ಇಲ್ಲವೋ? ಬಿಜೆಪಿಯೇ ಉತ್ತರ ಕೊಡಬೇಕು