ಕೇದಾರನಾಥ ದೇವಸ್ಥಾನದಲ್ಲಿ 228 ಕೆಜಿ ಚಿನ್ನ ನಾಪತ್ತೆ: ಶ್ರೀಗಳ ಸ್ಪೋಟಕ ಹೇಳಿಕೆ

0
24

ಮಹರಾಷ್ಟ್ರ : ಕೇದಾರನಾಥ ದೇಗುಲದಲ್ಲಿ ನಡೆದ ಚಿನ್ನಾಭರಣ ಹಗರಣದ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದು, 228 ಕಿಲೋಗ್ರಾಂಗಳಷ್ಟು ಚಿನ್ನ ನಾಪತ್ತೆಯಾಗಿದ್ದು, ಯಾವುದೇ ತನಿಖೆಯನ್ನು ಪ್ರಾರಂಭಿಸಿಲ್ಲ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ದೆಹಲಿಯಲ್ಲಿ ಕೇದಾರನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸುವ ಯೋಜನೆಗಳನ್ನು ಅವರು ಪ್ರಶ್ನಿಸಿ, ಇದು ಮತ್ತೊಂದು ಹಗರಣಕ್ಕೆ ಕಾರಣವಾಗಬಹುದು ಎಂದರು.
ಮಹರಾಷ್ಟ್ರದಲ್ಲಿ ಮಾದ್ಯಮಗಳೋಂದಿಗೆ ಮಾತನಾಡಿರುವ ಅವರು ಕೇದಾರನಾಥದಲ್ಲಿ ಚಿನ್ನದ ಹಗರಣವಾಗಿದೆ; ಆ ವಿಷಯ ಏಕೆ ಪ್ರಶ್ನಿಸುತ್ತಿಲ್ಲಾ? ಅಲ್ಲಿ ಹಗರಣ ಮಾಡಿದ ನಂತರ ಈಗ ದೆಹಲಿಯಲ್ಲಿ ಕೇದಾರನಾಥವನ್ನು ನಿರ್ಮಿಸಲಾಗುತ್ತಿದೆ? ಕೇದಾರನಾಥದಿಂದ 228 ಕೆಜಿ ಚಿನ್ನ ನಾಪತ್ತೆ ನಂತರ ದೆಹಲಿ ಮತ್ತೊಂದು ಹಗರಣಕ್ಕೆ ಕಾರಣವಾಗಬಹುದು ಎಂದರು. ಇದಕ್ಕೆಲ್ಲ ಯಾರು ಹೊಣೆ? ಎಂದು ಪ್ರಶ್ನಸಿದ್ದಾರೆ.

Previous articleಉದ್ಧವ್ ಠಾಕ್ರೆಗೆ ವಿಶ್ವಾಸಘಾತ ಆಗಿದೆ
Next articleಗಾಂಜಾ ಮಾರಾಟ ೧೩ ಜನರ ಬಂಧನ: ಒಂದು ಕೆಜಿ ಗಾಂಜಾ ವಶ