Home Advertisement
Home ತಾಜಾ ಸುದ್ದಿ ಕೇಂದ್ರ ರಾಜಕಾರಣಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ ಶಾಸಕ ಎಸ್.ಎ. ರವೀಂದ್ರನಾಥ್

ಕೇಂದ್ರ ರಾಜಕಾರಣಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ ಶಾಸಕ ಎಸ್.ಎ. ರವೀಂದ್ರನಾಥ್

0
171
ರವೀಂದ್ರನಾಥ್

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ್ ರಾಜ್ಯ ರಾಜಕಾರಣಕ್ಕೆ ಬಂದರೆ ಅವರ ಕ್ಷೇತ್ರ ನನಗೆ ಸಿಗುತ್ತದೆ. ಆದ್ದರಿಂದ ಅವರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಪರೋಕ್ಷವಾಗಿ ಕೇಂದ್ರ ರಾಜಕಾರಣಕ್ಕೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಂ. ಸಿದ್ದೇಶ್ವರ್ ಅವರಿಗೆ ನನ್ನ ಕ್ಷೇತ್ರ ಬಿಟ್ಟು ಕೊಡಲು ನಾನು ತಯಾರಿದ್ದೇನೆ. ಅವರು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹಾಗೊಂದು ವೇಳೆ ಅವರಿಗೆ ಉತ್ತರಕ್ಕೆ ಟಿಕೆಟ್ ಸಿಕ್ಕರೆ ಅವರನ್ನು ಗೆಲ್ಲಿಸಲು ನಾನು ಪ್ರಯತ್ನಿಸುತ್ತೇನೆ. ಆಗ ಅವರ ಸ್ಥಾನಕ್ಕೆ ನನಗೆ ಟಿಕೇಟ್ ಸಿಗುತ್ತದೆ. ನಾನು ಸಂಸದ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದರು.
ಈ ಹಿಂದೆ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಕೊಡುವುದಿಲ್ಲ ಎಂದಿದ್ದ ಬಿಜೆಪಿ ಪಕ್ಷದ ವರಿಷ್ಠರು ಈಗ ಕೊಡುತ್ತೇವೆ ಎಂದು ಹೇಳುತ್ತಿದ್ದು, 75 ವರ್ಷ ದಾಟಿದವರಿಗೆ ಕಡಿಮೆ ಪ್ರಮಾಣದಲ್ಲಿ ಟಿಕೆಟ್ ಕೊಡುತ್ತಿದ್ದು ಅದರಲ್ಲಿ ನಾನು ಒಬ್ಬ. ಟಿಕೆಟ್ ಸಿಕ್ಕರೆ ಗೆದ್ದು ಜನಸೇವೆ ಮಾಡುತ್ತೇನೆ ಎಂದರು.
ಮದುವೆ ಆಗದ ಹೆಣ್ಣುಮಗಳಿದ್ದರೆ ಯಾರೂ ಬೇಕಾದರೂ ಮದುವೆ ಆಗಲು ಮುಂದೆ ಬರುತ್ತಾರೆ. ಅದೇ ರೀತಿ ಚುನಾವಣೆ ಹತ್ತಿರ ಬರುತ್ತಿದೆ ಎಂದರೆ ಆಕಾಂಕ್ಷಿತರು ಮನವಿ ಕೊಡುವುದು ಸಹಜ. ರಾಜಕಾರಣದಲ್ಲಿರುವ ತಾವು 50 ವರ್ಷದಿಂದ ಪಕ್ಷ ಹೇಳಿದಂತೆ ಕೇಳಿಕೊಂಡು ಬಂದಿದ್ದೇನೆ ಈಗಲೂ ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದರು.