ನವದೆಹಲಿ: ಭಾರತ-ಕೆನಡಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಕೆನಡಾ ಪ್ರಜೆಗಳಿಗೆ ವೀಸಾ ಸೇವೆಯನ್ನು ಅಮಾನತುಗೊಳಿಸಿರುವ ಕುರಿತು ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಬಿಎಲ್ಎಸ್ ಇಂಟರ್ ನ್ಯಾಶನಲ್ ಸಂಸ್ಥೆಯು ಕೆನಡಿಯನ್ ಅಂತರ್ಜಾಲ ತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆ,
“ಭಾರತಕ್ಕೆ ಪ್ರವಾಸ ಕೈಗೊಳ್ಳುವವರಿಗೆ ವಿಶೇಷ ಸೂಚನೆ ಎಂದು ಜಾಲತಾಣದಲ್ಲಿ ನಮೂದಿಸಿದ್ದು ಮುಂದಿನ ಸೂಚನೆಯವರೆಗೆ ಸೆಪ್ಟೆಂಬರ್ 21, 2023 ರಿಂದ ಭಾರತೀಯ ವೀಸಾ ಸೇವೆಗಳನ್ನು ಅಮಾನತುಗೊಳಿಸಲಾಗಿದೆ” ಎಂದಿದೆ.


























