ಬಳ್ಳಾರಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ವಿಭಾಗದ ಭದ್ರತಾ ನಿರೀಕ್ಷಕ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ಧಾರೆ. ನಗರದ ಕೇಂದ್ರ ಕಾರಾಗೃಹದ ಬಳಿ ಹುಸೇನಪ್ಪ(54) ಅವರ ಶವ ಪತ್ತೆಯಾಗಿದೆ.
ಕಳೆದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹುಸೇನಪ್ಪ ಇಂದು ಬೀದರ್ ನಲ್ಲಿ ಚಾಲಕರ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಬೀದರ್‌ಗೆ ತೆರಳು ತಮ್ಮ ನಿವಾಸದಿಂದ ಬಸ್ ನಿಲ್ದಾಣಕ್ಕೆ ಹೋಗಿದ್ದರು. ಇಂದು ಬೆಳಗಿನ ಜಾವ ಅವರ ಮೃತ ದೇಹ ಪತ್ತೆಯಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಗುರುತು ಇವೆ. ತಲೆಯಲ್ಲಿ ತೀವ್ರ ರಕ್ತಸ್ರಾವ ಆಗಿ ಸಾವಿಗೀಡಾಗಿದ್ದಾರೆ. ಇದೊಂದು ಕೊಲೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಾರಕಾಸ್ತçಗಳಿಂದ ಹೊಡೆದು ಸಾಯಿಸಲಾಗಿದೆ ಎಂದು ಅನುಮಾನ ಇವೆ. ಸ್ಥಳಕ್ಕೆ ಎಸ್‌ಪಿ ರಂಜೀತ್‌ಕುಮಾರ್ ಬಂಡಾರು, ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ಅಧಿಕಾರಿ ದೇವರಾಜ ಭೇಟಿನೀಡಿ, ಪರಿಶೀಲಿಸಿದ್ದಾರೆ. ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.