ಕೃಷ್ಣಾ ನದಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ನಾಪತ್ತೆ

0
12

ಯಾದಗಿರಿ: ಸ್ನಾನಕ್ಕೆಂದು ಕೃಷ್ಣಾ ನದಿಗೆ ಹೋಗಿದ್ದ ಇಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಕಕ್ಕೇರಾ ಸಮೀಪದ ಬೆಂಚಿಗಡ್ಡಿಯಲ್ಲಿ ನಡೆದಿದೆ.
ವಿದ್ಯುತ್ ಪವರ್ ಪ್ಲಾಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದ ನಾಗಲ್ಯಾಂಡ್ ರಾಜ್ಯದ ಅಲಂ ಹಾಗೂ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದ ಮಾರುತಿ ನೀರು ಪಾಲಾದ ದುರ್ದೈವಿಗಳಾಗಿದ್ದಾರೆ. ಕಳೆದೆರೆಡು ಮೂರು ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದ್ದು, ಈ ವೇಳೆ ಸ್ನಾನಕ್ಕೆಂದು ಹೋಗಿದ್ದ ಇಬ್ಬರು ಯುವಕರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.

Previous articleದೀಪಾವಳಿ ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ
Next articleಕಿತ್ತೂರು ಉತ್ಸವ ಜ್ಯೋತಿಗೆ ಯರಗಟ್ಟಿಯಲ್ಲಿ ಅದ್ದೂರಿ ಸ್ವಾಗತ