ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಯುವಕರು ಸಾವು

0
23

ಹಾವೇರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ಮಂಜು ಸಣ್ಣಮನಿ(20) ಹಾಗೂ ರಾಜು ಕರೆಪೇಟೆ(22) ಮೃತಪಟ್ಟ ಯುವಕರು. ಗ್ರಾಮದ ಜಮೀನೊಂದರಲ್ಲಿ ಇದ್ದ ಕೃಷಿ ಹೊಂಡದಲ್ಲಿ ಈ ಇಬ್ಬರು ಸ್ನೇಹಿತರು ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಎದೆ ಎತ್ತರಕ್ಕೆ ಬೆಳೆದಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಯತ್ನಾಳ ಮರಳಿ ಬಿಜೆಪಿಗೆ ಬಂದೇ ಬರುತ್ತಾರೆ
Next articleಪೊಲೀಸರ ಥಳಿತಕ್ಕೆ ಯುವಕ ಸಾವು ಆರೋಪ: ಶಾಸಕ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ