ಕುರ್ಚಿಗೆ ಕಂಟಕ ಬಂದಾಗ ಸಿಎಂ ಜಾತಿ ಗಣತಿ ಮುನ್ನೆಲಗೆ

0
29

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರ್ಚಿಗೆ ಕಂಟಕ ಬಂದಾಗ ಜಾತಿ ಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿ ಗಣತಿ ಬಗ್ಗೆ ಪ್ರಾಮಾಣಿಕತೆ ಇಲ್ಲ. ಇವರು ಹುಡುಕಾಟಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಲವಾರು ಹೇಳಿದೆ. ಶೋಷಿತ ಸಮುದಾಯ, ಎಲ್ಲಾ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬುದು ಭಾರತೀಯ ಜನತಾ ಪಾರ್ಟಿ ನಿಲುವು ಸ್ಪಷ್ಟವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವಾಗ ಕುರ್ಚಿಗೆ ಅಭದ್ರತೆ ಕಾಡುತ್ತದೆ, ಆಗ ಈ ಜಾತಿ ಗಣತಿ ವಿಷಯವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಜಾತಿ ಗಣತಿ ವಿಷಯ ಸಂಬಂಧ ಎರಡು ಬಾರಿ ಸಚಿವ ಸಂಪುಟ ಕರೆದು ಚರ್ಚೆ ಮಾಡಲಾಯಿತು. ಆದರೂ ಸ್ಪಷ್ಟತೆ ಇಲ್ಲ. ಈಗ ಸತೀಶ್ ಜಾರಕಿ ಹೊಳಿ ಹೇಳಿತ್ತಾರೆ, ಜಾತಿ ಗಣತಿ ಅನುಷ್ಠಾನಕ್ಕೆ ಇನ್ನು ಒಂದು ವರ್ಷ ಬೇಕೆಂದು ಹೇಳಿಕೆ ನೀಡುತ್ತಿದ್ದಾರೆ. ಜಾತಿ ಗಣತಿ ಹೆಸರು ಇಟ್ಟುಕೊಂಡು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಜಾತಿ ಗಣತಿ ಬಗ್ಗೆ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಸ್ಪಷ್ಟವಾದ ನಿಲುವು ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

Previous articleಜನಿವಾರ್‌ ಪ್ರಕರಣ: ಬೆಳಗಾವಿಯಲ್ಲಿ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ
Next articleBCCI ವಾರ್ಷಿಕ ಗುತ್ತಿಗೆ ಪ್ರಕಟ