ಕುಡಿಯುವ ನೀರಿನ ಸಮಸ್ಯೆ: ಟವರ್ ಏರಿದ ಯುವಕ

0
13

ವಿಜಯಪುರ: ನನ್ನ ಗ್ರಾಮಕ್ಕೆ ಕುಡಿಯುವ ನೀರಿಲ್ಲ ಎಂದು ಯುವಕನೊಬ್ಬ ಮೊಬೈಲ್‌ ಟವರ್‌ ಏರಿದ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಅರೆಬೆತ್ತಲೆಯಾಗಿ ಕೂಗಾಡಿ ನನ್ನ ಗ್ರಾಮಕ್ಕೆ ಕುಡಿಯುವ ನೀರಿಲ್ಲ. ಪಿಡಿಒ, ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪ ಮಾಡಿ ಇಂಡಿ ಬಸವೇಶ್ವರ ಸರ್ಕಲ್‌ನಲ್ಲಿರುವ ಜಿಯೋ ಟವರ್ ಅನ್ನು ಯುವಕ ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ ಕಡಣಿ ಎಂಬಾತನೇ ಟವರ್‌ ಏರಿರುವುದು ಎಂದು ತಿಳಿದುಬಂದಿದೆ. 250 ಅಡಿ ಎತ್ತರದ ಟವರ್‌ನ ತುದಿಗೆ ಯುವಕ ಏರಿ, ನಮ್ಮ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಪರಿಹರಿಸಿದರೆ ಮಾತ್ರವೇ ನಾನು ಟವರ್‌ನಿಂದ ಇಳಿಯುತ್ತೇನೆ, ಈ ವೇಳೆ ಟವರ್‌ ಹತ್ತಿ ಆತನನ್ನು ಕಾಪಾಡಲು ಮುಂದಾದರೆ, ಟವರ್‌ನಿಂದ ಹಾರಿ ಬಿಡುವುದಾಗಿ ಬೆದರಿಸಿದ್ದಾನೆ. . ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ, ಅಗ್ನಿಶಾಮಕ ದಳದ ಅಧಿಕಾರಿಗಳು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleವಿಡಿಯೋ ಆಧರಿಸಿ ಕೀಡಿಗೇಡಿ ಗೂಂಡಾಗಳೆಲ್ಲರನ್ನೂ ಬಂಧಿಸಿ
Next articleಹನುಮಾನ್ ಚಾಲೀಸಾ ಕೇಸ್‌: ಶೋಭಾ ಕರಂಧ್ಲಾಜೆ ಸೇರಿ ಹಿಂದೂ ಕಾರ್ಯಕರ್ತರು ವಶಕ್ಕೆ