Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕುಡಿದ ಮತ್ತಲ್ಲಿ ಕೊಡಲಿಯಿಂದ ಹೊಡೆದು ಪತ್ನಿಯ ಹತ್ಯೆ

ಕುಡಿದ ಮತ್ತಲ್ಲಿ ಕೊಡಲಿಯಿಂದ ಹೊಡೆದು ಪತ್ನಿಯ ಹತ್ಯೆ

0
82
ಡ್ರಿಂಕ್ಸ್

ಚಿಕ್ಕಮಗಳೂರು: ಕುಡಿದ‌ ಮತ್ತಿನಲ್ಲಿ‌ ಪತ್ನಿಯನ್ನು‌ ಪತಿಯೇ ಹತ್ಯೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ.
ಕಿರುಗುಂದ ಗ್ರಾಮದ ನಿವಾಸಿ ಪದ್ಮಾಕ್ಷಿ (40) ಹತ್ಯೆಯಾದ ದುರ್ದೆವಿಯಾಗಿದ್ದು, ಪತಿ ಚಂದ್ರು ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ರಾತ್ರಿ ಚಂದ್ರು ಕುಡಿದು ಮನೆಗೆ ಬಂದಿದ್ದು, ಕುಡಿತದ ವಿಚಾರಕ್ಕೆ ಪತಿ, ಪತ್ನಿ‌ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು ಕುಪಿತನಾದ ಪತಿ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಪದ್ಮಾಕ್ಷಿ ಮೇಲೆ ಹಲ್ಲೆ ಮಾಡಿ ಒದ್ದು ಮನೆಯಿಂದ ಹೊರ ಹಾಕಿದ್ದಾನೆ.
ಬಳಿಕ ಚಂದ್ರು ಮನೆಯೊಳಗೇ ಮಲಗಿದ್ದಾನೆ, ಅತ್ತ ಗಂಭೀರ ಗಾಯಗೊಂಡಿದ್ದ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಬೆಳಗಾಗುತ್ತಲೇ ಪತ್ನಿ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರ ತಿಳಿದ ಕೂಡಲೇ ಅಕ್ಕಪಕ್ಕದ ಮನೆಯವರು ಗೋಣಿಬೀಡು ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿ ಚಂದ್ರು ನನ್ನು ವಶಕ್ಕೆ ಪಡೆದಿದ್ದಾರೆ.

Previous articleಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ
Next articleಐಟಿ ದಾಳಿಯಿಂದ ಕಾಂಗ್ರೆಸ್ ಸರ್ಕಾರದ ಕಳ್ಳಾಟ ಬಯಲು