ಕುಕನೂರು: ಕುಕನೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು ೪೦೦ ಎಕರೆ ಭೂಮಿ ವಕ್ಫ್ ಬೋರ್ಡ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದ್ದು ರೈತರನ್ನು ಕೆರಳಿಸಿದೆ.
ಕುಕನೂರ ಪಪಂ ೧೦ ಗುಂಟೆ ಜಾಗೆ ಮತ್ತು ಪಟ್ಟಣದ ವಿದ್ಯಾಶ್ರೀ ಶಾಲೆ, ವಾಲ್ಮೀಕಿ ಕಾಲೋನಿ, ಟೀಚರ್ಸ್ ಕಾಲೋನಿ ಸೇರಿದಂತೆ ಇನ್ನೂ ಹಲವಾರು ಜಮೀನುಗಳ ಪಹಣಿಯಲ್ಲಿ ೨೦೧೬ರಲ್ಲಿ ಮತ್ತು ೨೦೧೯ ಹಾಗೂ ೨೦೨೪ರ ನಂತರ ವಕ್ಫ್ ಕಾಣಿಸಿಕೊಂಡಿದ್ದು ಸುಮಾರು ೧೬ ಜನರಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ.
ರೈತರು ತಮ್ಮ ಜಮೀನು ಕಳೆದುಕೊಳ್ಳುವಂತಾಗಬಾರದು. ರೈತರ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ. ರೈತರ ಜಮೀನು ಖಾತೆಗಳಿಂದ ವಕ್ಫ್ ತೆರವುಗೊಂಡಾಗಲೇ ರೈತರಿಗೆ ನೆಮ್ಮದಿ ಎಂದು ಅನೇಕರು ಹೇಳಿದ್ದು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.