ಕುಂದಗೋಳದಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ರೋಡ್ ಶೋ

0
19

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬೃಹತ್ ರೋಡ್ ಶೋ ನಡೆಸಿದರು.
ಕುಂದಗೋಳದ ಪ್ರವಾಸಿ ಮಂದಿರದ ಹತ್ತಿರ ನಿರ್ಮಾಣ ಮಾಡಿದ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಪ್ರಿಯಾಂಕಾ ಗಾಂಧಿ ಅವರನ್ನು ಸಾವಿರಾರು ಕಾರ್ಯಕರ್ತರು ಮುಖಂಡರು ಅದ್ಧೂರಿ ಯಾಗಿ ಸ್ವಾಗತಿಸಿದರು. ಹೆಲಿಕಾಪ್ಟರ್ ಇಳಿದ ತಕ್ಷಣ ಹೆಲಿಪ್ಯಾಡ್ ಸುತ್ತ ನಿಂತಿದ್ದ ಕಾರ್ಯಕರ್ತರ ಹತ್ತಿರ ತೆರಳಿ ಕೈ ಕುಲಕಿದ್ದು ವಿಶೇಷವಾಗಿತ್ತು. ಮೆರವಣಿಗೆಯುದ್ಧಕ್ಕೂ ಡೊಳ್ಳು, ಜಗ್ಗಲಗಿ, ಗೊಂಬೆ ಕುಣಿತ ಗಮನ ಸೆಳೆಯಿತು. ರೋಡ್ ಶೋ ನಲ್ಲಿ ಭಾಗವಹಿಸಿದ್ದ ಸಾವಿರಾರು ಕಾರ್ಯಕರ್ತರತ್ತ ಪ್ರಿಯಾಂಕಾ ಗಾಂಧಿ ಕೈ ಬೀಸಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಅನೀಲಕುಮಾರ ಪಾಟೀಲ, ಎಂ.ಎಸ್. ಅಕ್ಕಿ ಸೇರಿದಂತೆ ಸಾವಿರಾರು‌ ಕಾರ್ಯಕರ್ತರು‌ ಭಾಗವಹಿಸಿದ್ದರು.

Previous articleಇಂದು ಮತದಾನ ಮಾಡಿದ ಹಿರಿಯ ನಟಿ ಲೀಲಾವತಿ
Next articleಜೋಳದ ರೊಟ್ಟಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ